ಪಡಂಗಡಿ ಪ್ರಾ.ಕೃ.ಸ. ಸಂಘದ ದಶಮಾನೋತ್ಸವದ ಪ್ರಯುಕ್ತ ಕ್ರೀಡಾಕೂಟ

padangady kridakuta copyಪಡಂಗಡಿ : ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಪಡಂಗಡಿ ಇದರ ದಶಮಾನೋತ್ಸವ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಉತ್ಸವದ ಪ್ರಯುಕ್ತ ಪಡಂಗಡಿ-ಗರ್ಡಾಡಿ ಗ್ರಾಮದ ಗ್ರಾಮಸ್ಥರಿಗೆ ವಿವಿಧ ಕ್ರೀಡೆಯನ್ನು ನ. 20ರಂದು ನಡೆಸಲಾಯಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ಗರ್ಡಾಡಿ ಜ್ಯೋತಿಷಿ ವಿಠಲ ಪೂಜಾರಿಯವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಶುಭ ಹಾರೈಸಿದರು.
ಪಡಂಗಡಿ ಸಿ.ಎ ಬ್ಯಾಂಕ್‌ನ ಅಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್ ದಶಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಪಡಂಗಡಿ ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಿ, ಬ್ಯಾಂಕಿನ ನಿರ್ದೇಶಕರಾದ ಶಂಕರ ಶೆಟ್ಟಿ, ಕೃಷ್ಣಪ್ಪ, ಹಾಮದ್‌ಬಾವ, ಮ್ಯಾಕ್ಸಿಂ ಸಿಕ್ವೇರಾ, ಸವಿತಾ, ಪಡಂಗಡಿ ಗ್ರಾ.ಪಂ ಸದಸ್ಯರಾದ ಸುಧಾಕರ ಪೂಜಾರಿ, ಪದ್ಮಾವತಿ, ಸುಕೇಶ್, ಗರ್ಡಾಡಿ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಹಳ್ಳಿಂಜ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಬ್ಯಾಂಕ್ ಸಿಬ್ಬಂದಿ ಉಮೇಶ್ ಸ್ವಾಗತಿಸಿ, ಹಾಮದ್‌ಬಾವ ಧನ್ಯವಾದವಿತ್ತರು. ಪುರುಷರಿಗೆ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್, ಮಕ್ಕಳಿಗೆ ವಿವಿಧ ಕ್ರೀಡೆಯನ್ನು ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.