ಸಮೂಹ ಉಜಿರೆಯಿಂದ ರಂಗ ತರಬೇತಿ – ನಾಟಕ ಪ್ರದರ್ಶನ

ಉಜಿರೆ : ಸಮೂಹವು ತನ್ನ 25ನೇ ವರ್ಷವನ್ನಾಚರಿಸುತ್ತಿರುವ ಈ ಶುಭಾವಸರದಲ್ಲಿ ಸಮೂಹ ಸದಸ್ಯರನ್ನೊಳಗೊಂಡ ರಂಗಾಸಕ್ತರಿಂದ ನಾಟಕವೊಂದನ್ನು ಪ್ರದರ್ಶಿಸಲು ನಿರ್ಧರಿಸಿದೆ. ನೀನಾಸಂ ಹೆಗ್ಗೋಡಿನ ರಂಗತಜ್ಞರ ಸಹಕಾರದಲ್ಲಿ ನಾಟಕದ ತರಬೇತಿಯು ಬರುವ ಡಿಸೆಂಬರ್ ತಿಂಗಳ ಮೊದಲ ಯಾ ಎರಡನೇ ವಾರದಲ್ಲಿ ಆರಂಭವಾಗಿ ತಿಂಗಳ ಕೊನೆಯಲ್ಲಿ ತರಬೇತಿಯಲ್ಲಿ ಸಿದ್ದಗೊಂಡ  ನಾಟಕದ ಪ್ರದರ್ಶನವನ್ನು ಮಾಡಲಿದೆ. ಪ್ರತೀ ಸಂಜೆ ೫ರಿಂದ ೯ರವರೆಗೆ ನಡೆಯುವ ಈ ಕಾರ್ಯಾಗಾರದಲ್ಲಿ ಭಾಗವಹಿಸಲು ರಂಗಾಸಕ್ತರೆಲ್ಲರಿಗೂ ಅವಕಾಶವಿದೆ. ಭಾಗವಹಿಸಲಿಚ್ಚಿಸುವವರು ಕೂಡಲೇ ಸಮೂಹದ ಕಾರ್ಯದರ್ಶಿಯವರಲ್ಲಿ ಹೆಸರು ನೊಂದಾಯಿಸಬಹುದು ಎಂದು ಸಮೂಹದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಸಂಪರ್ಕಕ್ಕೆ- 9448335432/9480572505).

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.