ಡಿಸೆಂಬರ್ 24, 25ರಂದು ಬಂದಾರಿನಲ್ಲಿ ಯುವಜನ ಮೇಳ

Advt_NewsUnder_1
Advt_NewsUnder_1
Advt_NewsUnder_1

 ಬೆಳ್ತಂಗಡಿ : ಮುಂದಿನ ಜ. 6 ಮತ್ತು 7 ರಂದು ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ನಿಗಧಿಯಾಗಿರುವುದರಿಂದ ಅದಕ್ಕೆ ಮುಂಚಿತವಾಗಿ ಡಿಸೆಂಬರ್ 24 ಮತ್ತು 25 ರಂದು ತಾಲೂಕು ಯುವಜನ ಮೇಳವನ್ನು ಬಂದಾರು ಗ್ರಾಮದಲ್ಲಿ ನಡೆಸಲು ದಿನಾಂಕ ಅಂತಿಮಗೊಳಿಸಲಾಗಿದೆ ಎಂದು ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ್ ನಾರಾವಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಂದಾರು ಗ್ರಾಮದ ಮೈರೋಳ್ತಡ್ಕ ಸದಾಶಿವ ಯುವಕ ಮಂಡಲದ ಆತಿಥ್ಯದಲ್ಲಿ ಈ ವರ್ಷದ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ. ಅದಕ್ಕಾಗಿ ತಾಲೂಕಿನ ಯುವಕ ಯುವತಿ ಹವ್ಯಾಸಿ ಮಂಡಳಿಗಳು ತಾಲೀಮಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9449914186 ನಂಬರನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.