ಲಕ್ಷದೀಪೋತ್ಸವ ಪಾದಯಾತ್ರೆ ಬಗ್ಗೆ ತಣ್ಣೀರುಪಂತ ಗ್ರಾಮಸ್ಥರು ಮತ್ತು ಒಕ್ಕೂಟದ ಸಮಾಲೋಚನಾ ಸಭೆ

paada yathre copyತಣ್ಣೀರುಪಂತ : ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ಪ್ರಯುಕ್ತ ನಾಡಿನ ಉದ್ದಗಲದಿಂದ ಶ್ರೀ ಕ್ಷೇತ್ರಕ್ಕೆ ಭಕ್ತರ ಪಾದಯಾತ್ರೆ ನಡೆಯುತ್ತಿದ್ದು ಈ ಪ್ರಯುಕ್ತ ಗ್ರಾ. ಯೋ ಮಡಂತ್ಯಾರು ವಲಯದ ತಣ್ಣೀರುಪಂತ ಗ್ರಾಮದ ಪ್ರಗತಿ ಬಂಧು ಒಕ್ಕೂಟದ ಸಮಾಲೋಚನಾ ಸಭೆ ಹಾಗೂ ಪೂರ್ವಭಾವಿ ಸಿದ್ದತಾ ಸಭೆಯು ನ. 19 ರಂದು ನಡೆಯಿತು.
ಮಡಂತ್ಯಾರು ವಲಯದ ಅಭಿಮಾನಿ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಅವರು ಪಾದಯಾತ್ರೆಯ ಬಗ್ಗೆ ವಿವರ ನೀಡಿದರು. ಈ ಸಂದರ್ಭ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಪುಷ್ಪರಾಜ್ ಜೈನ್ ಮಡಂತ್ಯಾರು, ವಲಯ ಮೇಲ್ವಿಚಾರಕಿ ರವಿಕಲಾ, ಜನಜಾಗೃತಿ ವೇದಿಕೆಯ ತಾಲೂಕು ಸಮಿತಿ ಸದಸ್ಯ ಪ್ರಭಾಕರ ಗೌಡ, ಗ್ರಾಮ ಸಮಿತಿ ಅಧ್ಯಕ್ಷ ರಶೀದ್ ಸಿ. ಕೆ, ಒಕ್ಕೂಟದ ಅಧ್ಯಕ್ಷ ಭವಾನಿ, ವಲಯದ ಮಾಜಿ ಉಪಾಧ್ಯಕ್ಷ ಕೆ ರಾಘವ, ತಣ್ಣೀರುಪಂತ ಎಸ್‌ಡಿಎಂಸಿ ಅಧ್ಯಕ್ಷ ಶ್ರೀಧರ ಪೂಜಾರಿ, ಅಳಕ್ಕೆ ಒಕ್ಕೂಟದ ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳು ಎಲ್ಲಾ ಸದಸ್ಯರು ಹಾಜರಿದ್ದು ಸಹಕಾರ ನೀಡುವುದಾಗಿ ತಿಳಿಸಿದರು. ಭಾಗವಹಿಸುವಿಕೆಯ ಕ್ರಮದ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಯಿತು. ಪ್ರಭಾಕರ ಗೌಡ ನಿರ್ವಹಿಸಿದರು. ರಶೀದ್ ಸಿ. ಕೆ ಸ್ವಾಗತಿಸಿದರು. ಕೆ ರಾಘವ ಧನ್ಯವಾದವಿತ್ತರು. ಚಿತ್ರ, ವರದಿ: ಕೆ ರಾಘವ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.