ಒಟ್ಲ ಗರಡಿ ನೇಮೋತ್ಸವ: ಸಮಾಲೋಚನ ಸಭೆ

otla temple 1 copy

otla temple copy

ಶಿಶಿಲ : ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದ ಮುಂದಿನ ಯೋಜನೆ ಮತ್ತು ನೇಮೋತ್ಸವದ ಸಮಾಲೋಚನೆ ಸಭೆಯು ನ.19ರಂದು ಆಡಳಿತ ಸಮಿತಿಯ ಗೌರವಾಧ್ಯಕ್ಷ ಚಿತ್ತರಂಜನ್, ಧರ್ಮಧರ್ಶಿಗಳು ಕಂಕನಾಡಿ ಗರೋಡಿ, ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ ಹರೀಶ್ ಪೂಂಜ, ಧರ್ಮಧರ್ಶಿ ಜನಾರ್ಧನ ಬಂಗೇರ, ಧಾರ್ಮಿಕ ಮುಂದಾಳು ಜಿತೇಂದ್ರ ಕೊಟ್ಟಾರಿ, ಆಡಳಿತ ಸಮಿತಿ ಅಧ್ಯಕ್ಷ ರಮೇಶ್ ಬಂಗೇರ, ಕ್ಷೇತ್ರಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾಬು ಪೂಜಾರಿಯವರ ಉಪಸ್ಥಿತಿಯಲ್ಲಿ ಮಂಗಳೂರು ಸಂಘನಿಕೇತನದಲ್ಲಿ ನಡೆಯಿತು.
ಕೋಟಿ ಚೆನ್ನಯರ ಮೂರ್ತಿಯನ್ನು ಕಂಕನಾಡಿ ಗರೋಡಿಯಲ್ಲಿ ಕೆತ್ತನೆ ಮಾಡಿ ಶ್ರೀ ಕ್ಷೇತ್ರ ಒಟ್ಲಕ್ಕೆ ಶೋಭಾಯಾತ್ರೆ ಮೂಲಕ ಕೊಂಡೊಯ್ಯುವ ಬಗ್ಗೆ ತೀರ್ಮಾನಿಸಲಾಯಿತು. ತಾಲೂಕುವಾರು ಸಮಿತಿ ರಚನೆ ಮಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಅಮೀತ್ ರಾಜ್ ಕೊಡಿಕಲ್, ಸಂದೀಪ್ ಶೆಟ್ಟಿ, ಪೃಥ್ವಿರಾಜ್ ಬಂಗೇರ, ಕುಶಾಲಪ್ಪ ಗೌಡ, ಸೂರ್ಯನಾರಾಯಣ ಮುಡೆತ್ತಾಯ ಕ್ಷೇತ್ರಾಭಿವೃದ್ಧಿ ಸಮಿತಿಯ ಹಾಗೂ ಬ್ರಹ್ಮಶ್ರೀ ಫ್ರೇಂಡ್ಸ್‌ನ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.