HomePage_Banner_
HomePage_Banner_
HomePage_Banner_

ಗುಡ್ರಾದಿ: ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

gudradi amantrana bidugade copy ರೆಖ್ಯ: ಶ್ರೀ ಗುಡ್ರಾಮಲ್ಲೇಶ್ವರ ದೇವಳದ ಬ್ರಹ್ಮಕಲಶೋತ್ಸವವು 2017ರ ಜನವರಿ ತಿಂಗಳಲ್ಲಿ ನಡೆಯಲಿದ್ದು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಬೀಡಿನಲ್ಲಿ ಬಿಡುಗಡೆ ಮಾಡಿದರು.
ಶ್ರೀ ಕ್ಷೇತ್ರ ಗುಡ್ರಾಮಲ್ಲೇಶ್ವರ ದೇವಳದ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರೂ ಆಗಿರುವ ರಾಜರ್ಷಿ ಡಿ.ವೀರೇಂದ್ರ ಹೆಗ್ಗಡೆಯವರು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಬ್ರಹ್ಮಕಲಶೋತ್ಸವದ ತಯಾರಿಯ ಬಗ್ಗೆ ವಿಚಾರಿಸಿ ಸಲಹೆಸೂಚನೆಗಳನ್ನು ನೀಡಿ ಆಶೀರ್ವದಿಸಿದರು. . ಈ ಸಂದರ್ಬದಲ್ಲಿ ಹೇಮಾವತಿ ವಿ ಹೆಗ್ಗಡೆ ಹಾಗೂ ಹರ್ಷೇಂದ್ರ ಹೆಗ್ಗಡೆ ಯವರು ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಸಾಂಗವಾಗಿ ನೆರವರಲಿ ಎಂದು ಆಶೀರ್ವದಿಸಿ ದರು. ಈ ಸಂದರ್ಬದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೆಂಕಟ್ರಮಣ ಗೌಡ ಕೈಕುರೆ,ಉಷಾ ವೆಂಕಟ್ರಮಣ ಗೌಡ ಕೈಕುರೆ, ಆಡಳಿತ ಸಮಿತಿ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ, ಜೀಣೋದ್ದಾರ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಭಟ್ ಕೆದುಂಬಳ, ಕಾರ್ಯಾಧ್ಯಕ್ರಾದ ಬಾಲಕೃಷ್ಣ ಗೌಡ ಒಕ್ಕಲಿಗ, ವಸಂತ ಗೌಡ ಗುಡ್ರಾದಿ, ಪ್ರಧಾನ ಕಾರ್ಯದರ್ಶಿ ಸದಾಶಿವನ್ ಟಿಕೆ., ಪ್ರಧಾನ ಸಂಚಾಲಕ ಜಯರಾಮ ನೆಲ್ಲಿತ್ತಾಯ, ಧರ್ಮಸ್ಥಳ ಸಮುದಾಯಾಭಿವೃದ್ದಿ ಅಧಿಕಾರಿ ಗಣೇಶ್ ಭಟ್, ಕಾರ್ಯದಶಿ ಲಕ್ಷ್ಮಣ ಗೌಡ ಕನ್ನೆಕಂಡ, ಜತೆ ಕಾರ್ಯದರ್ಶಿ ಆನಂದ, ಸಂಚಾಲಕರಾದ ಆನಂದ ಗೌಡ, ಕೇಶವ ಗೌಡ, ಕೃಷ್ಣಪ್ಪ ಗೌಡ, ಶೀನಪ್ಪ ಗೌಡ, ಸುಂದರ ಗೌಡ, ನೇಮಣ್ಣ ಗೌಡ, ಅಡೆಂಜ ದೇವಳದ ಕಾರ್ಯದರ್ಶಿ ರಾಧಾಕೃಷ್ಣ ಗೌಡ, ಮಹಾಗಣಪತಿ ಪಂಚಲಿಂಗೇಶ್ವರ ದೇವಳದ ವತಿಯಿಂದ ಲಕ್ಮಣ ಗೌಡ, ಪೂವಪ್ಪ ಗೌಡ, ನಾಗೇಶ ಗೌಡ, ಕುಶಾಲಪ್ಪ ಗೌಡ ಜನಾರ್ಧನ ಗೌಡ, ಗ್ರಾಮಾಭಿವೃದ್ದಿ ಯೋಜನೆಯ ಸೇವಾನಿರತ ರಾಮಚಂದ್ರ ಗೌಡ, ಸಂತೋಶ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.