ನಾರಾವಿಯಲ್ಲಿ ನ.20ರಂದು ಬೃಹತ್ ಆರೋಗ್ಯ ಮತ್ತು ರಕ್ತದಾನ ಶಿಬಿರ

ನಾರಾವಿ : ಸೇವೆ-ಸಂಸ್ಕಾರ- ಸುರಕ್ಷಾ ಎಂಬ ಧ್ಯೇಯವಾಕ್ಯದಡಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಮನೆಮಾತಾಗಿರುವ ವಿಶ್ವ ಹಿಂದೂ ಪರಿಷತ್ ಭಜರಂಗ ದಳ, ಪರಸ್ಪರ ಘಟಕ ಈದು, ಪರಸ್ಪರ ಯುವಕ ಮಂಡಲ ನಾರಾವಿ ಇವುಗಳ ಆಶ್ರಯದಲ್ಲಿ ನ.20 ರಂದು ನಾರಾವಿ ಸರಕಾರಿ ಶಾಲಾ ವಠಾರದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಎಲ್ಲಾ ವಿಭಾಗದ ತಜ್ಞ ವೈದ್ಯರ ತಂಡ ಹಾಗೂ ರೆಡ್‌ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಇವರ ಸಹಯೋಗದೊಂದಿಗೆ ಹುತಾತ್ಮ ವೀರ ಯೋಧರ ಸವಿನೆನಪಿಗಾಗಿ ಬೃಹತ್ ಉಚಿತ ಆರೋಗ್ಯ ಮೇಳ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಂಡಿದೆ ಎಂದು ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಶಿಬಿರದಲ್ಲಿ ಉಚಿತ ಕನ್ನಡಕ ವಿತರಣೆ, ಹೃದಯ ರೋಗ ತಪಾಸನೆ, ಚರ್ಮ ರೋಗ ಚಿಕಿತ್ಸೆ, ಕಣ್ಣಿನ ತಪಾಸಣೆ, ಸ್ತ್ರೀ ರೋಗ ತಪಾಸಣೆ ಮತ್ತು ಚಿಕಿತ್ಸೆ, ಬೆನ್ನುಮೂಳೆ ಹಾಗೂ ಇತರ ಮೂಳೆ ಸಂಬಂಧಿ ತಪಾಸಣೆ, ಕೀಲು ನೋವಿನ ತಪಾಸಣೆ ಹಾಗೂ ಚಿಕಿತ್ಸೆ, ಮಕ್ಕಳ ರೋಗ ತಪಾಸಣೆ ಹಾಗೂ ಚಿಕಿತ್ಸೆ, ಕಿವಿ-ಮೂಗು-ಗಂಟಲು ರೋಗ ತಪಾಸಣೆ ಹಾಗೂ ಚಿಕಿತ್ಸೆ, ಜನರಲ್ ಚಿಕಿತ್ಸೆ (ಬಿ.ಪಿ ಶುಗರ್ ಪರೀಕ್ಷೆ ಇತ್ಯಾಧಿ) ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದರು. ಭಜರಂಗ ದಳ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್ ಶಿಬಿರದ ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಿತಿ ಗೌರವಾಧ್ಯಕ್ಷ ಜಗದೀಶ್ ಅಂಚನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಸೇರಿದಂತೆ ಪ್ರಮುಖ ಗಣ್ಯರು ಭಾಗಿಯಾಗಲಿದ್ದಾರೆ. ಡಾ| ಪದ್ಮನಾಭ ಕಾಮತ್ ಸೇರಿದಂತೆ ಖ್ಯಾತ ವೈದ್ಯರ ತಂಡವೇ ಶಿಬಿರ ನಡೆಸಲು ಆಗಮಿಸಲಿದೆ ಎಂದು ತಿಳಿಸಿದರು. ಸಂಘಟಕರಾದ ಪ್ರಸಾದ್ ಪೂಜಾರಿ, ಅಶೋಕ ದೇವಾಡಿಗ, ಸುಧಾಕರ ಪೂಜಾರಿ ಮತ್ತು ಉದಯ ಹೆಗ್ಡೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.