ಮುಂಡಾಜೆಯಲ್ಲಿ ಸಹಕಾರ ಸಪ್ತಾಹಕ್ಕೆ ಚಾಲನೆ

Advt_NewsUnder_1
Advt_NewsUnder_1
Advt_NewsUnder_1

mundaje sahakara sapthaja chalane copyಮುಂಡಾಜೆ : ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ 63ನೇ ಅಖಿಲಭಾರತ ಸಹಕಾರಿ ಸಪ್ತಾಹವನ್ನು ಸಂಘದ ನಿಕಟಪೂರ್ವ ಅಧ್ಯಕ್ಷ ಪಿ.ವೆಂಕಟ್ರಮಣ ಹೆಬ್ಬಾರ್ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು.
ಮುಂಡಾಜೆ ಪೇಕ್ಸ್ ಎನ್.ಎಸ್ ಗೋಖಲೆಯವರ ಸಾರಥ್ಯದಲ್ಲಿ ಜನೋಪಯೋಗಿ ಕೆಲಸಗಳನ್ನು ನಡೆಸಿಕೊಂಡು ಬರುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು. ಸಂಘದ ಅಧ್ಯಕ್ಷ ಗೋಖಲೆಯವರು ಮಾತನಾಡುತ್ತಾ ಈ ವರುಷದ ಸಪ್ತಾಹವನ್ನು ಜೈ ಜವಾನ್, ಜೈ ಕಿಸಾನ್ ಧ್ಯೇಯ ವಾಕ್ಯದೊಂದಿಗೆ ಸದಸ್ಯರಿಗೆ ಪೆನ್ಶನ್ ಯೋಜನೆ, ಜಲಸಂರಕ್ಷಣಾ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಗೋವಿಂದ ಚಿಪ್ಳುಣ್ಕರ್, ಮೋಹನಚಂದ್ರ ಗೋಖಲೆ ಸಿಇಒ ನಾರಾಯಣ ಫಡ್ಕೆ ಉಪಸ್ಥಿತರಿದ್ದರು. ಕಕ್ಕಿಂಜೆ ಶಾಖಾ ಮೆನೇಜರ್ ವೆಂಕಟೇಶ್ವರ ಭಟ್ ಸ್ವಾಗತಿಸಿ, ಸದಾನಂದ ಬಿ. ವಂದಿಸಿದರು. ಮಧುಕರ ರಾವ್ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.