ಆಳ್ವಾಸ್ ಸಂಚಾರಿ ಚಿಕಿತ್ಸಾಲಯ ಉದ್ಘಾಟನೆ ಗ್ರಾಮೀಣ ಭಾಗದ ಜನತೆಗೂ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ: ಡಾ| ಮೋಹನ ಆಳ್ವ

alvas sanchari chikistalaya udhgatne copyಹೊಸಂಗಡಿ: ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಸೇವೆ ಹಾಗೂ ವೈದ್ಯಕೀಯ ಸೇವೆ ಒದಗಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ನಡೆಸುತ್ತಿದ್ದೇವೆ. ಗ್ರಾಮೀಣ ಭಾಗದ ಬಡ ಜನತೆಗೂ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯಬೇಕೆಂಬ ಉದ್ದೇಶದಿಂದ ಸಂಚಾರಿ ಚಿಕಿತ್ಸಾಲಯವನ್ನು ಪ್ರಾರಂಭಿಸಲಾಗಿದೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.
ಅವರು ಹೊಸಂಗಡಿಯಲ್ಲಿ ಜರಗಿದ ಆಳ್ವಾಸ್ ಹೆಲ್ತ್ ಸೆಂಟರ್‌ನ ಆಳ್ವಾಸ್ ಸಂಚಾರಿ ಚಿಕಿತ್ಸಾಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಧರ್ಮದರ್ಶಿ ಎ. ಜೀವಂಧರ ಕುಮಾರ್ ಅವರು ಸಂಚಾರಿ ಚಿಕಿತ್ಸಾಲಯವನ್ನು ಉದ್ಘಾಟನೆಗೊಳಿಸಿ ಶುಭ ಹಾರೈಸಿದರು.
ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಆಂಟನಿ ವಿ. ಲೂಯಿಸ್, ಪಡ್ಡಂದಡ್ಕ ನೂರುಲ್‌ಹುದಾ ಜುಮ್ಮಾ ಮಸೀದಿಯ ಧರ್ಮಗುರು ಅಬೂಬಕ್ಕರ್ ಸಿದ್ದಿಕ್ ದಾರಿಮಿ, ನಾರಾವಿ ಕ್ಷೇತ್ರದ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾವಸಂತ್, ಹೊಸಂಗಡಿ ತಾ.ಪಂ. ಸದಸ್ಯ ಓಬಯ್ಯ ಆರಂಬೋಡಿ, ಆಳ್ವಾಸ್ ಆಸ್ಪತ್ರೆಯ ವೈದ್ಯರುಗಳಾದ ಡಾ| ವಿನಯ ಆಳ್ವ, ಡಾ| ರೋಶನ್ ಶೆಟ್ಟಿ, ಡಾ| ಅಮರ್‌ದೀಪ್, ಹೊಸಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹೊಸಂಗಡಿ ಗ್ರಾ.ಪಂ. ಮತ್ತು ಫ್ರೆಂಡ್ಸ್ ಕ್ಲಬ್ ಸಹಕಾರ ನೀಡಿದವು. ಕಾರ್ಯಕ್ರಮ ಸಂಯೋಜಕ ಹರಿಪ್ರಸಾದ್ ಪಿ. ಸ್ವಾಗತಿಸಿ, ಹೊಸಂಗಡಿ ಗ್ರಾ.ಪಂ. ಸದಸ್ಯ ಶ್ರೀಪತಿ ಉಪಾಧ್ಯಾಯ ವಂದಿಸಿದರು. ಆಳ್ವಾಸ್ ಸಮಾಜಕಾರ್ಯ ವಿಭಾಗದ ಸಕೇಶ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.