ಉಜಿರೆಯಲ್ಲಿ ಯಕ್ಷಗಾನ ಪ್ರಸಂಗ ಮತ್ತು ಪ್ರಯೋಗ ಸಪ್ತಾಹ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರಿಗೆ ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತ್ರಿ ಪ್ರದಾನ

Kuriya vitala shasthri copyಉಜಿರೆ : ಶ್ರೀ ಜನಾರ್ದನ ದೇವಸ್ಥಾನ ಉಜಿರೆ ಇವರ ಆಶ್ರಯದಲ್ಲಿ ಕುರಿಯ ವಿಠಲಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆ ಇವರ ನೇತೃತ್ವದಲ್ಲಿ ನೆಡ್ಲೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನ ಮಂಗಳೂರು ಇವರ ಸಹಭಾಗಿತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರ ಅನುಗ್ರಹದೊಂದಿಗೆ ಉಜಿರೆ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ನ. 13 ರಂದು ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.
ಲಂಡನ್ ಭಾಗವತೆರೆಂದೇ ಪ್ರಸಿದ್ಧಿ ಪಡೆದಿರುವ ಹಿರಿಯ ಭಾಗವತರಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರಿಗೆ ಈ ಸಾಲಿನ ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಪ್ರದಾನ ನಡೆಯಿತು. ಉಜಿರೆ ಶ್ರೀ ಜನಾರ್ದನ ದೇವಾಲಯ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ಅವರು ಉಪಸ್ಥಿತರಿದ್ದು ಆಶೀರ್ವಾದ ಮಾಡಿದರು. ಕುರಿಯ ವೆಂಕಟ್ರಮಣ ಶಾಸ್ತ್ರಿ, ನೆಡ್ಲೆ ರಾಮ ಭಟ್ ಉಪಸ್ಥಿತರಿದ್ದರು. ಸೇರಾಜೆ ಸೀತಾರಾಮ ಭಟ್ ಅವರು ಕುರಿಯ ಮತ್ತು ನೆಡ್ಲೆ ಸಂಸ್ಮರಣೆ ಉಪನ್ಯಾಸ ನೀಡಿದರು. ಭಾಸ್ಕರ ರೈ ಕುಕ್ಕುವಳ್ಳಿ ಅವರು ತಿರಮಲೇಶ್ವರ ಶಾಸ್ತ್ರಿಯವರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದರು. ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಸಂಚಾಲಕ ಉಜಿರೆ ಎನ್. ಅಶೋಕ ಭಟ್ ಪ್ರಸ್ತಾವನೆಗೈದು ಸ್ವಾಗತಿಸಿದರು.
ಈ ಸಮಾರಂಭದಲ್ಲಿ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸೀತಾರಾಮ ತೋಲ್ಪಾಡಿತ್ತಾಯ ಅವರನ್ನು ಅಭಿನಂದಿಸಲಾಯಿತು.
ಸಪ್ತಾಹದ ಪ್ರಯುಕ್ತ ನ.10 ರಂದು ಸಂಜೆ ಭುಗು, ನ.11 ರಂದು ಮಾಯಾಮೃಗ, ನ.12 ರಂದು ಸುದರ್ಶನ, ನ.೧೩ ರಂದು ಶಾಪಾನುಗ್ರಹ, ನ.14 ರಂದು ಪರಶುರಾಮ, ನ.15 ರಂದು ತಾಮ್ರಧ್ವಜ ಮತ್ತು ನ.16 ರಂದು ಯಕ್ಷ- ಭರತ- ನೃತ್ಯ- ನವರಸಾಯನ ಕಾರ್ಯಕ್ರಮ ಸುಂದರವಾಗಿ ಮೂಡಿಬಂತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.