ಶ್ರೀ ಸತ್ಯಸಾಯಿ ಅಖಂಡ ಭಜನೆ – ಸೇವಾಂಜಲಿ

sathya 1

sathya

ಬೆಳ್ತಂಗಡಿ : ಭಗವಾನ್ ಶಿರಡಿಸಾಯಿ ಸತ್ಯಸಾಯಿ ಸೇವಾಕ್ಷೇತ್ರ ಹಳೆಕೋಟೆಯಲ್ಲಿ ಜಾಗತಿಕ ಅಖಂಡ ಭಜನೆ ಪ್ರಯುಕ್ತ ಭಜನೆ ಹಾಗೂ ಸೇವಾಂಜಲಿ ಕಾರ್ಯಕ್ರಮವು ವಿಜೃಂಭಣೆಯಿಂದ ಜರಗಿತು. ಕಕ್ಕಿಂಜೆ, ಗಂಡಿಬಾಗಿಲು ಸಿಯೋನ್ ಆಶ್ರಮದ ಪವಿತ್ರಾತ್ಮರಿಗೆ ಅಕ್ಕಿ ಹಾಗೂ ಬಿಸ್ಕತ್ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು. ಆಶ್ರಮದ ಆಡಳಿತಾಧಿಕಾರಿ ಫೌಲೋಸ್ ಅವರು ಧನ್ಯವಾದವಿತ್ತರು. ಆಶ್ರಮದ ಸಿಬ್ಬಂದಿಗಳು ಸಹಕರಿಸಿದರು.  ಈ ಎಲ್ಲಾ ಕಾರ್ಯಕ್ರಮವು ಭಗವಾನ್ ಶಿರಡಿಸಾಯಿ ಸತ್ಯಸಾಯಿ ಸೇವಾಕ್ಷೇತ್ರ ಹಳೆಕೋಟೆ, ಸನಾತನ ಸಾರಥಿ ಸೇವಾ ಟ್ರಸ್ಟ್ ರಿ. ಬೆಳ್ತಂಗಡಿ ಇಲ್ಲಿನ ಅಧ್ಯಕ್ಷರಾದ ಸಿ.ಎಚ್ ಪ್ರಭಾಕರ ಅವರ ನೇತೃತ್ವದಲ್ಲಿ ಸದಸ್ಯರೆಲ್ಲರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.