ಡಾ| ಬಿ. ಯಶೋವರ್ಮರಿಗೆ ಶಿಕ್ಷಣಕರ್ಣಧಾರ ಪ್ರಶಸ್ತಿ ಪ್ರದಾನ

ujire yashovarma copyಉಜಿರೆ : ಉಜಿರೆ ಎಸ್‌ಡಿಎಂ. ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲಾ ರಾಗಿ ನಿವೃತ್ತರಾದ, ಶೈಕ್ಷಣಿಕ ಕ್ಷೇತ್ರದಲ್ಲಿ ಉಜಿರೆ ಕಾಲೇಜಿನ ಕೀರ್ತಿಯನ್ನು ಶಿಖರೋತ್ತರಕ್ಕೇರಿಸಿದ ಡಾ.ಬಿ. ಯಶೋವರ್ಮ ಅವರಿಗೆ ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ, ಮತ್ತು ಊರ ಹತ್ತು ಸಮಸ್ತರ ಪರವಾಗಿ ಶಿಕ್ಷಣಕರ್ಣಧಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಇದರ ಆಶ್ರಯದಲ್ಲಿ ಕುರಿಯ ವಿಠಲಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆ ಇವರ ನೇತೃತ್ವದಲ್ಲಿ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ನಡೆಯುತ್ತಿರುವ ಯಕ್ಷಗಾನದ ವೈಶಿಷ್ಟ್ಯಭರಿತ ಸಪ್ತಾಹದ ಪ್ರಮುಖ ಒಂದು ಕಾರ್ಯಕ್ರಮದ ಭಾಗವಾಗಿ ನ. 16 ರಂದು ಡಾ| ಬಿ ಯಶೋವರ್ಮ ಮತ್ತು ಸೋನಿಯಾ ವರ್ಮ ದಂಪತಿಯನ್ನು ಯಶೋವರ್ಮಾಭಿನಂದ ನಮ್ ಎನ್ನುವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಉಜಿರೆಯ ಹಿರಿಯ ಉದ್ಯಮಿ ಕೆ. ಸುಬ್ರಾಯ ಶೆಣೈ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್, ಉಪಸ್ಥಿತರಿದ್ದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿದ್ದರು. ಅವರ ಧರ್ಮಪತ್ನಿ ಕುಸುಮಾ ಪಡುವೆಟ್ನಾಯ ಉಪಸ್ಥಿತರಿದ್ದರು.
ಡಾ| ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು. ಉಜಿರೆಯ ಉದ್ಯಮಿ ಪಾಂಡುರಂಗ ಬಾಳಿಗ ಸ್ವಾಗತಿಸಿದರು. ಶ್ರೀಧರ ಕೆ.ವಿ. ವಂದನಾರ್ಪಣೆಗೈದರು.
ಅಭಿನಂದನೆ, ಸನ್ಮಾನ:
ಕಾರ್ಯಕ್ರಮದ ಸಂಯೋಜಕರ ಕಡೆಯಿಂದ ವಿಜಯರಾಘವ ಪಡುವೆಟ್ನಾಯ ದಂಪತಿಗಳನ್ನು ಅಭಿನಂದಿಸಲಾಯಿತು. ಕ್ರೀಡಾಪಟು ಹಾಗೂ ಯಕ್ಷಗಾನ ಕ್ಷೇತ್ರದ ಪ್ರತಿಭೆ ರಂಜಿತಾ ಎಲ್ಲೂರು ಅವರನ್ನೂ ವಿಶೇಷವಾಗಿ ಪ್ರೋತ್ಸಾಹಿಸಲಾಯಿತು.
ಸಾಂಸ್ಕೃತಿಕ ಪರ್ವ : ಬಳಿಕ ಪ್ರಯೋಗ ಪ್ರದರ್ಶನ ಎಂಬ ನೆಲೆಯಲ್ಲಿ ಯಕ್ಷ-ಭರತ-ನೃತ್ಯ-ನವರಸಾಯನ ಎನ್ನುವ ವಿಶೇಷ ಕಾರ್ಯಕ್ರಮ ಪ್ರಸ್ತುತಿಗೊಂಡು ಕಲಾಭಿಮಾನಿಗಳ ಮನತಣಿಸಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.