ತಾಲೂಕಿನ ಮೂರು ರಸ್ತೆಗಳ ಅಭಿವೃದ್ಧಿಗೆ ರೂ.25 ಕೋಟಿ ಮಂಜೂರು : ಬಂಗೇರ

Mogru shilanyasa copy ಮೊಗ್ರು ಬಾಂಗೇರು ಪ.ಜಾತಿ ಕಾಲನಿ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ವಸಂತ ಬಂಗೇರ ಶಿಲಾನ್ಯಾಸ ನೆರವೇರಿಸಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

ಬೆಳ್ತಂಗಡಿ : ಮೊಗ್ರು ಗ್ರಾಮದ ಬಾಂಗೇರು ಪ.ಜಾತಿಯ ಕಾಲನಿ ರಸ್ತೆ ಕಾಂಕ್ರೀಟೀಕರಣ ರೂ.೧೫ ಲಕ್ಷ, ಕರಾಯ-ಮುದಲೆಗುಂಡಿ ಪ.ಜಾತಿಯ ಕಾಲನಿ ರಸ್ತೆ ಕಾಂಕ್ರೀಟೀಕರಣ ರೂ.20ಲಕ್ಷ, ಇಳಂತಿಲ ಹಾರೆಕೆರೆ ಲಕ್ಕೆನಗಿರಿ ಪ.ಜಾತಿಯ ಕಾಲನಿ ರಸ್ತೆ ಕಾಂಕ್ರೀಟೀಕರಣ ರೂ.25ಲಕ್ಷ, ತೆಕ್ಕಾರು ಗ್ರಾಮದ ಕುಟ್ಟಿಕಳ ಪ. ಪಂಗಡ ಕಾಲನಿ ರಸ್ತೆ ಕಾಂಕ್ರೀಟೀಕರಣ ರೂ.18 ಲಕ್ಷ, ಶಿಶಿಲ-ಪೇರಿಕೆ ಎಂಬಲ್ಲಿ ಸೇತುವೆ ಕೂಡು ರಸ್ತೆ ರಚನೆ ರೂ.10 ಲಕ್ಷ ಸೇರಿದಂತೆ ಒಟ್ಟು ರೂ.88 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ ಕೆ. ವಸಂತ ಬಂಗೇರ ಅವರು ನ.೧೬ರಂದು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಮಾಯ್ತಿಲೋಡಿ ಈಶ್ವರ್ ಭಟ್ ಅವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು ನನ್ನ ಶಿಫಾರಸ್ಸಿನನ್ವಯ ಸಿ.ಆರ್.ಎಫ್ (ಕೇಂದ್ರಿಯ ರಸ್ತೆ ನಿಧಿ) ಯೋಜನೆಯಲ್ಲಿ ಬೆಳ್ತಂಗಡಿ ತಾಲೂಕಿನ ಮೂರು ರಸ್ತೆ ಕಾಮಗಾರಿಗಳಿಗೆ ರೂ.25 ಕೋಟಿ ಅನುದಾನ ಬಿಡುಗಡೆಯಾಗಿದೆ. ಧರ್ಮಸ್ಥಳ-ಮುಂಡಾಜೆ ರಸ್ತೆಗೆ ರೂ. 7ಕೋಟಿ ಮತ್ತು ಕಕ್ಕಿಂಜೆ-ನೆರಿಯ- ಪುದುವೆಟ್ಟು ರಸ್ತೆ ಮತ್ತು ಉಜಿರೆ-ಬೆಳಾಲು-ಕುಪ್ಪೆಟ್ಟಿ ರಸ್ತೆ ಅಭಿವೃದ್ಧಿಗೆ ರೂ. 18 ಕೋಟಿ ಮಂಜೂರಾಗಿದೆ. ನಾನು ಈ ರಸ್ತೆ ಅಭಿವೃದ್ಧಿಗೆ ಶಿಫಾರಾಸ್ಸು ಮಾಡಿ ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿತ್ತು. ಅದು ಈಗ ಮಂಜೂರುಗೊಂಡಿದೆ. ಆದರೆ ಸಂಸದರು ಇದನ್ನು ತಾನು ಮಂಜೂರು ಮಾಡಿರುವುದಾಗಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿಸಿದರು. ಈ ಭಾಗದ ಇಳಂತಿಲ-ಉಂತನಾಜೆ ರಸ್ತೆ ಮತ್ತು ಕುಟ್ಟಿಕಳ-ಪಿದಮಲೆ ರಸ್ತೆಯನ್ನು ಲೋಕೋಪಯೋಗಿ ಇಲಾಖಾ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿದ್ದೇನೆ ಎಂದು ಶಾಸಕ ವಸಂತ ಬಂಗೇರ ಈ ಸಂದರ್ಭ ನುಡಿದರು. ಎಂ. ಈಶ್ವರ ಭಟ್ ಸ್ವಾಗತಿಸಿದರು. ನ್ಯಾಯವಾದಿ ಮನೋಹರ ಇಳಂತಿಲ ಧನ್ಯವಾದವಿತ್ತರು.
ವಿವಿಧ ಕಡೆಗಳಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮಗಳಲ್ಲಿ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ತಾಲೂಕು ಪಂಚಾಯತು ಸದಸ್ಯರಾದ ಶ್ರೀಮತಿ ಕೇಶವತಿ, ಕೃಷ್ಣಯ್ಯ ಆಚಾರ್, ಶ್ರೀಮತಿ ಸುಜಾತ ಎನ್. ಶೆಟ್ಟಿ, ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್, ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ ಅಜಿಲ, ಸಹಾಯಕ ಇಂಜಿನಿಯರ್ ತೌಶೀಫ್ ಅಹಮ್ಮದ್, ತಾ.ಪಂ. ಮಾಜಿ ಅಧ್ಯಕ್ಷ ಚಂದಪ್ಪ ಪೂಜಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಶ್ರೀಮತಿ ಉಮಾವತಿ, ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಮಾಯಿಲತ್ತೋಡಿ ಈಶ್ವರ ಭಟ್, ಇಳಂತಿಲ ಗ್ರಾ.ಪಂ. ಅಧ್ಯಕ್ಷ ಯು.ಕೆ. ಇಸುಬು, ಮಾಜಿ ಅಧ್ಯಕ್ಷ ನ್ಯಾಯವಾದಿ ಮನೋಹರ ಇಳಂತಿಲ, ನವೀನ್ ರೈ, ಹರೀಶ್ ಗೌಡ ಬಂದಾರು, ಗ್ರಾ.ಪಂ. ಸದಸ್ಯೆ ಸವಿತಾ, ಈಶ್ವರ ಗೌಡ, ಗುಲಾಬಿ, ಗಣೇಶ್ ಪ್ರಸಾದ್, ತೆಕ್ಕಾರು ಗ್ರಾ.ಪಂ. ಅಧ್ಯಕ್ಷೆ ರಹಮತ್, ಉಪಾಧ್ಯಕ್ಷ ಅಬ್ದುಲ್ ರಜಾಕ್, ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು. ಅಳದಂಗಡಿಯ ಕಿರಣ್‌ಭಟ್ ಪೂಜಾ ವಿಧಿಗಳನ್ನು ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.