ಕಕ್ಕಿಂಜೆ : ಮೆಸ್ಕಾಂ ಇಲಾಖೆಯಲ್ಲಿ ಅತ್ಯುತ್ತಮ ಜನಪರ ಸೇವೆ ನೀಡುತ್ತಿರುವ ಚಾರ್ಮಾಡಿ ಹಾಗೂ ನೆರಿಯ ಪಂಚಾಯತ್ ವ್ಯಾಪ್ತಿಯಲ್ಲಿ ಲೈನ್ಮ್ಯಾನ್ ಆಗಿ ಕೆಲಸ ಮಾಡಿ, ಊರಿನ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದ, ಮೂಲತಃ ಮಂಡ್ಯ ಜಿಲ್ಲೆಯ ಕೃಷಿಕ ಕುಟುಂಬದ ಕೃಷ್ಣೇಗೌಡರನ್ನು ನ.13ರಂದು ಶ್ರೀ ಕೃಷ್ಣ ಆಸ್ಪತ್ರೆಯ ವಠಾರದಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ಬ್ಯಾಂಕ್ ನೆರಿಯ ಶಾಖೆಯ ವ್ಯವಸ್ಥಾಪಕ ಪ್ರವೀಣ್ ನಾಯಕ್, ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಡಿ.ಎ ರಹಿಮಾನ್, ಯೆನೆಪೋಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಪರ್ಕಾಧಿಕಾರಿ ಉಮೇಶ್ ಗೌಡ, ನೆರಿಯ ರೋಟರಿ ಸಮುದಾಯ ದಳ ಅಧ್ಯಕ್ಷ ರಾಜನ್ ಪಿ.ಕೆ, ಯೆನೆಪೋಯ ಆಸ್ಪತ್ರೆಯ ಡಾ| ದೀಪಕ್ ಟಿ.ಹೆಚ್, ಇವರೆಲ್ಲರ ಸಮ್ಮುಖದಲ್ಲಿ ಡಾ| ಮುರಳಿಕೃಷ್ಣ ಇರ್ವತ್ರಾಯ, ಡಾ| ವಂದನಾ ಎಂ ಇರ್ವತ್ರಾಯ, ಶಾಲು-ಫಲಪುಷ್ಪ-ಸ್ಮರಣಿಕೆ ನೀಡಿ ಸನ್ಮಾನಿಸಿದರು.