ಧರ್ಮಸ್ಥಳ: ಪುಸ್ತಕಗಳ ಲೋಕಾರ್ಪಣೆ: ಪ್ರಾಚೀನ ದೇಗುಲಗಳು ಮತ್ತು ಸ್ಮಾರಕಗಳು ಅಮೂಲ್ಯ ಸಂಪತ್ತು

dmllllಧರ್ಮಸ್ಥಳದಲ್ಲಿ ನ.13ರಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೆಂಗಳೂರಿನ ಕೆಂಗೇರಿ ಚಕ್ರಪಾಣಿ ಬರೆದ ದೇಗುಲಗಳ ದಾರಿ ಮತ್ತು ಟಿ. ಎಸ್. ಗೋಪಾಲ್ ಬರೆದ ಗುಡಿ ಗೋಪುರಗಳ ಸುತ್ತ ಮುತ್ತ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.
ಉಜಿರೆ: ಧರ್ಮಸ್ಥಳದಲ್ಲಿ ಭಾನುವಾರ ಅವರು ಬೆಂಗಳೂರಿನ ಕೆಂಗೇರಿ ಚಕ್ರಪಾಣಿ ಬರೆದ ದೇಗುಲಗಳ ದಾರಿ ಮತ್ತು ಟಿ. ಎಸ್. ಗೋಪಾಲ್ ಬರೆದ ಗುಡಿ ಗೋಪುರಗಳ ಸುತ್ತ ಮುತ್ತ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ನೇತೃತ್ವದಲ್ಲಿ ಈಗಾಗಲೇ ಇನ್ನೂರಕ್ಕೂ ಮಿಕ್ಕಿ ಪ್ರಾಚೀನ ದೇಗುಲಗಳು ಹಾಗೂ ಸ್ಮಾರಕಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗದ ಸೇವೆಯನ್ನು ಶ್ಲಾಘಿಸಿದ ಹೆಗ್ಗಡೆಯವರು ದೇವಸ್ಥಾನಗಳ ಬಗ್ಗೆ ಅವರ ಸಲಹೆಯನ್ನು ಸ್ವೀಕರಿಸುವುದಾಗಿ ಹೇಳಿದರು. ಬೆಂಗಳೂರು ಬಿ.ಎಸ್.ಎನ್.ಎಲ್.ನ ಉಪ ಮಹಾ ಪ್ರಬಂಧಕ ಗಣಪತಿ ಎಂ. ಭಟ್ ಅಧ್ಯಕ್ಷತೆ ವಹಿಸಿದರು.
ಟಿ. ಎಸ್. ಗೋಪಾಲ್, ಗೌರಿಪುರ ಚಂದ್ರ ಡಾ. ಚಿಂತಾಮಣಿ ಕೊಡ್ಲಕೆರೆ ಉಪಸ್ಥಿತರಿದ್ದರು. ಕೆಂಗೇರಿ ಚಕ್ರಪಾಣಿ ಸ್ವಾಗತಿಸಿದರು. ಚಂದ್ರಪ್ಪ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.