ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಮತು ಸಾಹಿತ್ಯ ಸಮ್ಮೇಳನ

ನಾಡಿನ ಪವಿತ್ರ ಯಾತ್ರಾಸ್ಥಳ ಧರ್ಮಸ್ಥಳದಲ್ಲಿ ಇದೇ 24ರಿಂದ 29ರ ವರೆಗೆ ಲಕ್ಷದೀಪೋತ್ಸವ ನಡೆಯಲಿದ್ದು ನ.27ರಂದು ಸರ್ವಧರ್ಮ ಸಮ್ಮೇಳನ ಮತ್ತು ನ.28ರಂದು ಸಾಹಿತ್ಯ
ಸಮ್ಮೇಳನ ನಡೆಯಲಿದೆ. ನ.27ರಂದು ಸಂಜೆ 5ಕ್ಕೆ ಸರ್ವಧರ್ಮ ಸಮ್ಮೇಳನವನ್ನು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ವಿ. ಗೋಪಾಲ ಗೌಡ ಉದ್ಘಾಟಿಸುವರು. ಶಿರಹಟ್ಟಿಂi ಫಕೀರ ಸಿದ್ದರಾಮ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
ನವ ದೆಹಲಿಯ ಡಾ. ಜಯಕುಮಾರ್ ಉಪಾಧ್ಯೆ, ಪುತ್ತೂರಿನ ಯಕ್ಷಗಾನ ಕಲಾವಿದ ಜಬ್ಬಾರ್ ಸಮೊ ಮತ್ತು ಧಾರವಾಡದ ವಿದ್ಯಾ ನಿಕೇತನದ ನಿರ್ದೇಶಕ ಪ್ರಶಾಂತ್ ಡಿಸೋಜಾ ಧಾರ್ಮಿಕ ಉಪನ್ಯಾಸ ನೀಡುವರು.
ಚೆನ್ನೈನ ಗಾಯತ್ರಿ ಗಿರೀಶ್ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದೆ. ಸೋಮವಾರ ಸಾಹಿತ್ಯ ಸಮ್ಮೇಳನವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಉದ್ಘಾಟಿಸುವರು.
ಬೆಂಗಳೂರಿನ ಖ್ಯಾತ ಸಾಹಿತಿ ಎಂ. ಎನ್. ವ್ಯಾಸ ರಾವ್ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನವಸುಧೇಂದ್ರ, ಸು ದ ಡಾ. ವೀಣಾ ಮತ್ತು ಬೆಂಗಳೂರಿನ ಹರಿಪ್ರಕಾಶ್ ಕೋಣೆಮನೆ ಉಪನ್ಯಾಸ ನೀಡುವರು. ಖ್ಯಾತ ಸಿನಿ ತಾರೆ ಕು. ಶೋಭನಾ ಮತ್ತು ತಂಡದ ಕಲಾವಿದರಿಂದ ಗೀತ ಗೋವಿಂದ ನೃತ್ಯ ಪ್ರದರ್ಶನವಿದೆ.
ರಾಜ್ಯಮಟ್ಟದ ವಸ್ತು ಪ್ರದರ್ಶನ: ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಪ್ರೌಢಶಾಲಾ ವಠಾರದಲ್ಲಿ ಇದೇ 24ರಿಂದ 29ರವರೆಗೆ ರಾಜ್ಯಮಟ್ಟದ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಇದೇ 24ರಂದು ಸಂಜೆ 5ಕ್ಕೆ ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವಸ್ತು ಪ್ರದರ್ಶನ ಉದ್ಘಾಟಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಪ್ರತಿ ದಿನ ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ವಸ್ತು ಪ್ರದರ್ಶನಕ್ಕೆ ಉಚಿತ ಪ್ರವೇಶಾವಕಾಶವಿದೆ. ವಿವಿಧ ಮನೋರಂಜನಾ ಕಾರ್ಯಕ್ರಮಗಳೂ ಇವೆ. 29ರಂದು ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮ ಸಮಾಪನಗೊಳ್ಳುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.