ಲಯನ್ಸ್ ಕ್ಲಬ್ ಬೆಳ್ತಂಗಡಿಗೆ ವಲಯಾಧ್ಯಕ್ಷರ ಅಧಿಕೃತ ಭೇಟಿ 4 ಕ್ಲಬ್‌ಗಳ ಪ್ರಗತಿ ಪರಿಶೀಲನೆ, ಸೇವಾ ಚಟುವಟಿಕೆಗಳಿಗೆ ಶ್ಲಾಘನೆ

Lions club valayadyakshara beti copy ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ವಲಯದ ಮೂರೂ ಕ್ಲಬ್‌ಗಳ ಪ್ರಗತಿ ಪರಿಶೀಲನೆ, ಹಾಗೂ ಇತರ ಕಾರ್ಯಕ್ರಮಗಳ ಅವಲೋಕನೆಯ ಭಾಗವಾಗಿ ವಲಯಾಧ್ಯಕ್ಷರು ಮತ್ತು ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿಯವರ ಅಧಿಕೃತ ಭೇಟಿ ಕಾರ್ಯಕ್ರಮ ಅ. 25 ರಂದು ಬೆಳ್ತಂಗಡಿ ಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಸುಶೀಲಾ ಎಸ್. ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯದ ವ್ಯಾಪ್ತಿಯಲ್ಲಿ ಬರುವ ಬೆಳ್ತಂಗಡಿ, ವೇಣೂರು, ಅಳದಂಗಡಿ, ನಾರಾವಿ ಕ್ಲಬ್‌ಗಳ ಅರ್ಧವಾರ್ಷಿಕ ವರದಿಯನ್ನು ಪಡೆದ ವಲಯಾಧ್ಯಕ್ಷ ರಾಜು ಶೆಟ್ಟಿಯವರು ಮಾತನಾಡಿ, ಕಳೆದ ೫ ತಿಂಗಳಲ್ಲಿ ಕ್ಲಬ್‌ಗಳು ಜನಪರವಾದ ಕಾರ್ಯಗಳನ್ನು ಕೈಗೊಂಡಿದ್ದು ಮುಂದಕ್ಕೆ ಇರುವ ಉಳಿಕೆ ಅವಧಿಯಲ್ಲಿ ಇನ್ನಷ್ಟು ಕಾರ್ಯಯೋಜನೆಗಳನ್ನು ಅನುಷ್ಠಾನಿಸಬೇಕಾಗಿದೆ. 100ನೇ ವರ್ಷದಲ್ಲಿರುವ ನಮ್ಮ ಲಯನ್ಸ್ ಕ್ಲಬ್‌ನ ಈ ಅವಧಿ ಅತ್ಯಂತ ಮಹತ್ವದ್ದಾಗಿದ್ದು ಈ ಅವಧಿಯ ಪದಾಧಿಕಾರಿಗಳಾಗಿರುವ ನಮ್ಮ ಅವಧಿಯಲ್ಲಿ ದಾಖಲೆ ನಿರ್ಮಾಣವಾಗಬೇಕು ಎಂಬ ಜವಾಬ್ಧಾರಿಯಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು. ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿ ಪ್ರವೀಣ್ ಕುಮಾರ್ ಇಂದ್ರ ಮಾತನಾಡಿ, ಇತ್ತೀಚೆಗೆ ತಾನು ಜಪಾನ್ ದೇಶಕ್ಕೆ ಹೋಗಿದ್ದ ಅನುಭವವನ್ನು ಹಂಚಿಕೊಂಡರು.
ಅಳದಂಗಡಿ ಲಯನ್ಸ್ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಉಪಸ್ಥಿತರಿದ್ದರು. ಬೆಳ್ತಂಗಡಿ ಕ್ಲಬ್ ಕಾರ್ಯದರ್ಶಿ ಮೇದಿನಿ ಡಿ. ಗೌಡ, ಅಳದಂಗಡಿ ಕ್ಲಬ್‌ನ ಕಾರ್ಯದರ್ಶಿ ವಿಜಯ ಕುಮಾರ್, ಮತ್ತು ನಾರಾವಿ ಮತ್ತು ವೇಣೂರು ಕ್ಲಬ್‌ಗಳ ಕಾರ್ಯದರ್ಶಿ ವರದಿ ವಾಚಿಸಿದರು.
ಧರಣೇಂದ್ರ ಕುಮಾರ್ ಜೈನ್, ಕೃಷ್ಣ ಆಚಾರ್, ನಿತ್ಯಾನಂದ ನಾವರ ಸೇರಿದಂತೆ ಎಲ್ಲಾ ಹಿರಿ, ಕಿರಿಯ ಸದಸ್ಯರು ಸಹಕರಿಸಿದರು. ಕೋಶಾಧಿಕಾರಿ ಅನಿಲ್ ನಾಯ್ಗ ವಂದಿಸಿದರು. ವರದಿ: ಅಚ್ಚು ಮುಂಡಾಜೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.