ಮಡಂತ್ಯಾರಿನ ಫ್ರೆಂಕ್ ಹಿಲೆರಿ ಡಿಸೋಜಾರಿಗೆ ಬಲಿಯೇಂದ್ರ ಪುರಸ್ಕಾರ

Advt_NewsUnder_1
Advt_NewsUnder_1
Advt_NewsUnder_1

Madanthyarina frenk hileri dsouzage baliyendra puraskara copyಬೆಳ್ತಂಗಡಿ : ತುಳುವೆರೆಂಕುಲು ಬೆಂಗಳೂರು ಇವರು ಫ್ರೇಂಕ್ ಹಿಲೆರಿ ಡಿಸೋಜಾ ಮಡಂತ್ಯಾರು ಇವರನ್ನು ನ.6ರಂದು ರವೀಂದ್ರ ಕಲಾ ಕ್ಷೇತ್ರ ಜೇಸಿ ರಸ್ತೆ ಬೆಂಗಳೂರಿನ ನಯನಾ ಸಭಾಂಗಣದಲ್ಲಿ ವರ್ಣರಂಜಿತ ಕಾರ್ಯಕ್ರಮದಲ್ಲಿ ತುಳು ಭಾಷೆಗೆ ನೀಡಿದ ವಿಶೇಷ ಪರಿಶ್ರಮ ಸಾಧನೆ ಗಮನಿಸಿ ಬಲಿಯೇಂದ್ರ ಪುರಸ್ಕಾರ ನೀಡಿ ಸನ್ಮಾನಿಸಿದರು. ಉರ್ವ ಪೊಂಪೈ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಫ್ರೇಂಕ್ ಹಿಲೆರಿ ಡಿಸೋಜಾ ತುಳು ತೃತೀಯ ಬಾಷೆಯಾಗಿ ಭೋದಿಸಿ 2015ರಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಪೊಂಪೈ ಪ್ರೌಢ ಶಾಲಾ ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಹಾಗೂ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅಲ್ಲದೆ ಶಾಲೆಯಲ್ಲಿ ತುಳು ಚಾವಡಿ ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ತುಳು ಯಕ್ಷಗಾನ ತರಬೇತಿ ನೀಡಿ ವಿದ್ಯಾರ್ಥಿಗಳಿಂದಲೇ ಪ್ರದರ್ಶನ ನೀಡಿದ್ದರು. ಇವರ ಸೇವೆಯನ್ನು ಗುರುತಿಸಿ ಬೆಂಗಳೂರಿನ ತುಳುವೆರೆಂಕುಲು ಸಂಸ್ಥೆ ಬಲಿಯೇಂದ್ರ ಪುರಸ್ಕಾರ ನೀಡಿ ಗೌರವಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.