ಹಿಂದೂ ಧರ್ಮಾಚರಣೆಗಳು ಭಾರತವನ್ನು ಜಗದ್ಗುರು ಸ್ಥಾನದತ್ತ ಕೊಂಡಯ್ಯಲಿವೆ: ಮುಕ್ತಾನಂದ ಸ್ವಾಮೀಜಿ

kokkada hindu parishath prgm 1 copy

kokkada hindu parishath prgm copy

ಕೊಕ್ಕಡ ಸಾರ್ವಜನಿಕ ನಗರ ಭಜನಾ ಷಷ್ಟ್ಯಬ್ದ ಮತ್ತು ನಗರ ಭಜನಾ ಸಪ್ತಾಹದ ಉದ್ಘಾಟನೆ

ನ.11: ಸಮಾರೋಪ ಸಮಾರಂಭ
ನ.11ರಂದು ಸಂಕ್ರಾಂತಿ ಮೈದಾನದಲ್ಲಿ ಬೃಹತ್ ಸಾಮೂಹಿಕ ಭಜನಾ ಸಮಾವೇಶ, ಷಷ್ಠ್ಯಬ್ದ ನಗರ ಭಜನಾ ಸಮಾರೋಪ ಜರುಗಲಿದ್ದು, ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದಾರೆ. ವಿಶ್ವಹಿಂದೂ ಪರಿಷತ್‌ನ ಅಂತರಾಷ್ಟ್ರೀಯ ಅಧ್ಯಕ್ಷರಾದ ಪ್ರವೀಣ್ ಭಾಯ್ ತೊಗಾಡಿಯಾ ಹಾಗೂ ಮಂಗಳೂರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹರು ನ. ಸೀತಾರಾಮ್ ಭಾಗವಹಿಸಿ ದಿಕ್ಸೂಚಿ ಭಾಷಣ ನೀಡಲಿದ್ದಾರೆ.
ಮುಖ್ಯಅತಿಥಿಗಳಾಗಿ ವಿಶ್ವಹಿಂದೂ ಪರಿಷತ್‌ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲಜೀ, ವಿಶ್ವಹಿಂದೂ ಪರಿಷತ್‌ನ ಅಧ್ಯಕ್ಷರಾದ ಪ್ರೊ| ಎಂ.ಬಿ. ಪುರಾಣಿಕ್, ಬಜರಂಗದಳದ ಕ್ಷೇತ್ರೀಯ ಸಂಯೋಜಕ ಸೂರ್ಯನಾರಾಯಣ, ರೆಖ್ಯ ಗುಡ್ರಾಮಲ್ಲೇಶ್ವರ ದೇವಸ್ಥಾನದ ಅಧ್ಯಕ್ಷರಾದ ಮಂಜುನಾಥ ಗೌಡ ಕೈಕುರೆ ಆಗಮಿಸಲಿದ್ದಾರೆ. ರಾ.ಸ್ವ.ಸೇ.ಸಂಘದ ಬೆಳ್ತಂಗಡಿ ಸಂಘ ಸಂಚಾಲಕರಾದ ಕೃಷ್ಣ ಭಟ್ ಕೊಕ್ಕಡ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಕೃಷ್ಣ ಕೆದಿಲಾಯ ಕೊಕ್ಕಡ, ನಾರಾಯಣ ಹೆಬ್ಬಾರ್ ಪುತ್ಯೆ, ದೇವ ಚಂದ್ರ ನೂಜಿಲೆ, ಕೊರಗಪ್ಪ ಆಚಾರ್ಯ ಆಲಡ್ಕ, ನಾರಾಯಣ ನಾಯ್ಕ ಓಣಿತ್ತಾರು ಇವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.

ಕೊಕ್ಕಡ : ವಿಘಟಿತಗೊಂಡಿರುವ ಹಿಂದೂ ಸಮಾಜವನ್ನು ವಿಶ್ವ ಹಿಂದೂ ಪರಿಷತ್ ಒಟ್ಟು ಮಾಡುವ ಪಣತೊಟ್ಟಿದೆ. ಅನ್ಯಧರ್ಮೀಯರ ದಾಳಿಯಿಂದ ನಲುಗಿದ್ದ ಕೊಕ್ಕಡದಲ್ಲಿ ಕಳೆದ ೬೦ ವರ್ಷಗಳ ಹಿಂದೆ ಹಿಂದೂ ಸಮಾಜವನ್ನು ಉಳಿಸಿ ಒಗ್ಗಟ್ಟಿನಲ್ಲಿ ಮುಂದುವರೆಯುವ ಸದುದ್ದೇಶವನ್ನಿಟ್ಟುಕೊಂಡು ಆರಂಭಿಸಲಾದ ನಗರ ಭಜನೆ ಸಪ್ತಾಹವು ಇಂದು ಅಸಂಖ್ಯಾತ ಸ್ವಧರ್ಮೀಯರ ಒಗ್ಗಟ್ಟಿಗೆ ಕಾರಣವಾಗಿರುವುದು ಸಂತಸದ ವಿಷಯ ಎಂದು ಶ್ರೀಕ್ಷೇತ್ರ ಕರಿಂಜದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಅವರು ನ.೬ ರಂದು ಕೊಕ್ಕಡದ ನಗರ ಭಜನಾ ಷಷ್ಟ್ಯಬ್ದ ಸಮಿತಿ, ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇವಾ ಟ್ರಸ್ಟ್, ನಗರ ಭಜನಾ ಸಮಿತಿಯ ಸಹಯೋಗದಲ್ಲಿ ಕೊಕ್ಕಡದಲ್ಲಿ ನಡೆಯುವ ನಗರ ಭಜನಾ ಷಷ್ಟ್ಯಬ್ದ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಧರ್ಮನಿಂದನೆ, ಹಿಂದೂ ಧರ್ಮದ ದೇವರ ನಿಂದನೆ ನಮ್ಮ ನಾಡಿನಲ್ಲಿ ನಿರಂತರ ನಡೆಯುತ್ತಿದೆ. ಕಟೀಲು ಮಾತೆಗೆ ಅವಹೇಳನವನ್ನು ಸಾಮಾಜಿಕ ಜಾಲತಾಣದಲ್ಲಿ ಮತಾಂಧ ನೊಬ್ಬ ಮಾಡಿದ ಕೃತ್ಯವನ್ನು ವಿರೋಧಿಸಿ ಲಕ್ಷೋಪಕ್ಷ ಹಿಂದೂ ಧರ್ಮೀಯರು ಭಜನಾ ಕಾರ್ಯಕ್ರಮದ ಮೂಲಕ ಶ್ರೀ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸಿದ್ದು ಕೆಲವೇ ದಿನಗಳಲ್ಲಿ ಈ ಕೃತ್ಯವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸುವಂತಾಗಿದೆ. ಭಜನಾ ಕಾರ್ಯಕ್ರಮದಲ್ಲಿ ನಮ್ಮ ಧರ್ಮವನ್ನು ಒಂದು ಗೂಡಿಸುವ ಶಕ್ತಿಯೂ ಧಾರಾಳವಾಗಿದ್ದು ಇದನ್ನು ಇನ್ನೂ ಎತ್ತರಕ್ಕೆ ಮುಂದಿನ ದಿನಗಳಲ್ಲಿ ಕೊಂಡೊಯ್ಯ ಬೇಕಾಗಿದೆ, ಭಾರತ ವಿಶ್ವಕ್ಕೇ ಜಗದ್ಗುರು ಆಗುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದರು.
ಉಜಿರೆಯ ಶ್ರೀ ದಂತ ಚಿಕಿತ್ಸಾಲಯದ ದಂತ ವೈದ್ಯರಾದ ಡಾ. ಎಂ. ಎಂ. ದಯಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಒಂದು ವಿಷಯದಲ್ಲಿ ಏಕಾಗ್ರತೆಯನ್ನು ಸಾಧಿಸುವುದನ್ನು ಧ್ಯಾನ ಎಂದು ಕರೆಯಲಾಗುತ್ತದೆ. ಧ್ಯಾನದ ತುರಿಯಾವಸ್ಥೆಯೇ ದರ್ಶನ ವಾಗಿರುತ್ತದೆ. ನಮ್ಮ ಪೂರ್ವಜ ತಪಸ್ವಿಗಳು ಇದೇ ರೀತಿಯ ಏಕಾಗ್ರತೆಯ ಧ್ಯಾನದಿಂದ ದೇವರ ಅಸ್ತಿತ್ವವನ್ನು ಕಂಡುಕೊಂಡಿದ್ದಾರೆ. ಪೇಜಾವರ ಶ್ರೀಗಳು ನೀಡಿರುವ ಭಗವದ್ಗೀತೆಯ ಸಂದೇಶವನ್ನು ಹೊತ್ತ ಹೊತ್ತಗೆಯನ್ನು ಮನೆ ಮನೆಗಳಿಗೂ ಇಲ್ಲಿ ನಗರ ಭಜನಾ ಷಷ್ಟ್ಯಾಬ್ದ ಸಮಯದಲ್ಲಿ ನೀಡಿದ್ದು ಪ್ರತೀ ದಿನ ದೇವರ ಮತ್ತು ನಮ್ಮ ಸಂಸ್ಕೃತಿಯ ಅರಿವನ್ನು ನಮ್ಮ ಮುಂದಿನ ಜನಾಂಗಕ್ಕೂ ವಿಸ್ತರಿಸುವ ಮಹತ್ತಾದ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಓಡಿಲ್ನಾಳ ಮಠದ ವಿದ್ವಾನ್ ಎಂ. ರಾಘವೇಂದ್ರ ಭಟ್ , ಬೆಳ್ತಂಗಡಿ ತಾಲೂಕು ಶಿವಳ್ಳಿ ಬ್ರಾಹ್ಮಣರ ಸಂಘದ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ನಗರ ಭಜನಾ ಷಷ್ಟ್ಯಬ್ದ ಸಮಿತಿಯ ಅಧ್ಯಕ್ಷ ಹರೀಶ್ ಪೂಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೊಕ್ಕಡ ಶ್ರೀರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಕುಶಾಲಪ್ಪ ಗೌಡ ಪಿ. ಮಾತನಾಡಿ ಕಳೆದ ೬೦ ವರ್ಷಗಳ ಹಿಂದೆ ಈ ಊರಲ್ಲಿ ಹಿಂದೂ ಸಮಾಜದ ಜನರು ಅನ್ಯ ಮತೀಯರ ಭಯದಿಂದಲೇ ಬದುಕಬೇಕಾಗಿದ್ದ ಕಾಲವಿತ್ತು . ಸನಿಹದ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯನ್ನೂ ನಡೆಸದಂತೆ ದಬ್ಬಾಳಿಕೆ ನಡೆಸಲಾಗಿದ್ದ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಬರ್ಗುಳ ಪುರುಷೋತ್ತಮ ನಾಯಕ್ ಮತ್ತು ಸಮಕಾಲೀನರ ದಂಡಪ್ರಯೋಗದ ರುಚಿಯನ್ನು ಅಲ್ಲಿ ತೋರಿಸಲಾಗಿ ಮತ್ತೆ ಹಿಂದೂ ಸಮಾಜ ಒಂದಾಗಬೇಕೆನ್ನುವ ನಿಟ್ಟಿನಲ್ಲಿ ಇಲ್ಲಿ ನಗರ ಭಜನೆಯನ್ನು ಆರಂಭಿಸಲಾಯಿತು ಎಂದು ನಗರ ಭಜನೆಯ ಷಷ್ಟ್ಯಬ್ದ ಆಚರಣಾ ಸಂದರ್ಭ ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಗಣೇಶ್ ಭಟ್ ಹಿತ್ತಿಲು ಸ್ವಾಗತಿಸಿದರು.
ವಿಶ್ವಹಿಂದೂ ಪರಿಷತ್‌ನ ಮಾಜಿ ಅಧ್ಯಕ್ಷ ಡಾ. ಗಣೇಶ ಪ್ರಸಾದ್ ನಿರೂಪಿಸಿದರು. ಶಿಕ್ಷಕ ಶಿವಾನಂದ ಗೌಡ ಸಂಕೇಶ ವಂದಿಸಿದರು.
ನಗರ ಭಜನಾ ಷಷ್ಟ್ಯಬ್ದ ಸಮಿತಿಯ ಸಂಚಾಲಕರಾದ ನವೀನ್ ನೆರಿಯ, ಭಾಸ್ಕರ್ ಧರ್ಮಸ್ಥಳ, ಕಾರ್ಯದರ್ಶಿ ಜನಾರ್ಧನ ಕೆ.ಪಿ., ನಗರ ಭಜನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಹಿತ್ತಿಲು, ವಿಶ್ವಹಿಂದೂ ಪರಿಷತ್ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ, ನಾರಾಯಣ ಗೌಡ ಪಿ., ಡಾ. ಮೋಹನದಾಸ್ ಗೌಡ ಮತ್ತು ಪದಾಧಿಕಾರಿಗಳು ಸಹಕರಿಸಿದರು.

ಚಿತ್ರ: ಜನಾರ್ದನ ಕೊಕ್ಕಡ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.