ಫಾತಿಮಾ ಮೇರಿ ಪವಾಡ ಮೂರ್ತಿ ಮೆರವಣಿಗೆ

kokkada pathima mary pavada murti copyಕೊಕ್ಕಡ : ಪೋರ್ಚುಗಲ್ ದೇಶದ ಕುರಿಗಾಹಿ ಮಕ್ಕಳಿಗೆ ೧೯೧೭ನೇ ಇಸವಿಯಲ್ಲಿ ಪ್ರತ್ಯಕ್ಷವಾಗಿದ್ದ ಸಂತ ಮೇರಿ ಮಾತೆ (ಫಾತಿಮಾ ಮರಿಯಮ್ಮ)ಯ ಪವಾಡ ಮೂರ್ತಿಯು ಪುತ್ತೂರು ವರಾಡೋದ ದೇವಾಲಯಗಳಲ್ಲಿ ಪೂಜನೆ ಗೊಂಡು  ಕೊಕ್ಕಡದ ಸಂತ ಜೋನರ ದೇವಾಲಯದಿಂದ ಸುಳ್ಯ ವರಾಡೊದ ಕಡಬದಲ್ಲಿರುವ ಸಂತ ಜೋಕೀಮರ ದೇವಾಲಯಕ್ಕೆ ನ.5ರಂದು ವಿಜ್ರಂಭಣೆಯ ಮೆರವಣಿಗೆಯ ಮೂಲಕ ಕಳುಹಿಸಿಕೊಡಲಾಯಿತು. ಕೊಕ್ಕಡ ಕೌಕ್ರಾಡಿಯಲ್ಲಿರುವ ಸಂತ ಜೋನರ ದೇವಾಲಯಕ್ಕೆ ಸೇರಿದ ಎಲ್ಲಾ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಸಂತ ಜೋನರ ದೇವಾಲಯದಲ್ಲಿ ಪಾಲ್ಗೊಂಡು ಮೆರವಣಿಗೆಯಲ್ಲಿ ಅಲಂಕೃತ ವಾಹನದಲ್ಲಿ ಈ ಮಾತೆಯ ಪವಾಡ ಮೂರ್ತಿಯನ್ನಿರಿಸಿ ಕೊಂಡೊಯ್ಯಲಾಯಿತು. ಕೊಕ್ಕಡ ಚರ್ಚಿನ ಧರ್ಮಗುರುಗಳಾದ ರೆ.ಫಾ. ರೊನಾಲ್ಡ್ ಲೋಬೋ, ಸಹಾಯಕ ಧರ್ಮಗುರುಗಳಾದ ರೆ. ಫಾ. ಸ್ಟ್ಯಾನಿ ಫೆರ್ನಾಂಡೀಸ್, ಮತ್ತು ಚರ್ಚಿನ ಪಾಲನಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಭಕ್ತರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.