ಕೊಕ್ಕಡ: ವಿವಿಧ ಕಾಮಗಾರಿಗಳ ಉದ್ಘಾಟನೆ-ಶಂಕುಸ್ಥಾಪನೆ

Advt_NewsUnder_1
Advt_NewsUnder_1
Advt_NewsUnder_1

kokkada silanyasa copyಕೊಕ್ಕಡ: ದ.ಕ. ಜಿ.ಪಂ. ಮಂಗಳೂರು, ಬೆಳ್ತಂಗಡಿ ತಾಲೂಕು ಪಂಚಾಯತ್, ಕೊಕ್ಕಡ ಗ್ರಾಮ ಪಂಚಾಯತ್, ದ.ಕ. ಜಿ.ಪಂ. ಇಂಜಿನಿಯರಿಂಗ್ ಬೆಳ್ತಂಗಡಿ ಉಪವಿಭಾಗ , ಲೋಕೋಪಯೋಗಿ ಇಲಾಖೆ, ಕೃಷಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಬೆಳ್ತಂಗಡಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ಪದ್ದತಿ ಅಭಿವೃದ್ದಿ ಮತ್ತು ಸುಧಾರಣಾ ಯೋಜನೆ ಇವುಗಳ ಸಹಭಾಗಿತ್ವದಲ್ಲಿ ಕೊಕ್ಕಡ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ನೂತನ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮ ನ.೯ರಂದು ಕೊಕ್ಕಡದಲ್ಲಿ ನಡೆಯಿತು. ಕೊಕ್ಕಡದಲ್ಲಿ 38 ಲಕ್ಷದ ಹೋಬಳಿಯ ರೈತಸಂಪರ್ಕ ಕೇಂದ್ರದ ನೂತನ ಕಟ್ಟಡ, ಬೋಳದಬೈಲು ಎಂಬಲ್ಲಿ 15 ಲಕ್ಷ ವೆಚ್ಚದಲ್ಲಿ ತಡೆಗೋಡೆ ರಚನೆ, ಕೊಕ್ಕಡ ಪಟ್ಟೂರು ರಸ್ತೆ 1 ಕೋಟಿ ವೆಚ್ಚದಲ್ಲಿ ಡಾಮರೀಕರಣ, ಮುಂಡೂರು ಪಲ್ಕೆ ಪ. ಪಂಗಡ ಕಾಲನಿ ಸಂಪರ್ಕ ರಸ್ತೆ 20 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣ, ಕೊಕ್ಕಡದ ರುದ್ರಭೂಮಿ ಯ 4.35 ಲಕ್ಷ ವೆಚ್ಚದ ನೂತನ ಕಟ್ಟಡಗಳನ್ನು ಬೆಳ್ತಂಗಡಿಯ ಶಾಸಕ ಕೆ. ವಸಂತ ಬಂಗೇರ ಉದ್ಘಾಟನೆ ನಡೆಸಿದರು.
ಕೊಕ್ಕಡ ಗ್ರಾಮದ ಡೆಂಜ ಪ.ಜಾತಿ ಕಾಲನಿ ರಸ್ತೆ 20.41 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣ, ಕೊಕ್ಕಡದ ಪೆರಿಯಶಾಂತಿ ಎಂಬಲ್ಲಿ ಸುಬ್ರಹ್ಮಣ್ಯ-ಉಡುಪಿ ರಸ್ತೆಯ 34.60 ರ ಸೇತುವೆ 8 ಕೋಟಿ 39 ಲಕ್ಷ ವೆಚ್ಚದ ಸೇತುವೆ ರಚನೆ, ಕೊಕ್ಕಡದಲ್ಲಿ 30 ಹಾಸಿಗೆಗಳ 4 ಕೋಟಿ 80 ಲಕ್ಷ ವೆಚ್ಚದ ಕಟ್ಟಡ ಈ ಎಲ್ಲಾ ಕಾಮಗಾರಿಗಳ ಶಂಕುಸ್ಥಾಪನೆ ಯನ್ನು ನೆರವೇರಿಸಲಾಯಿತು.
ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಬೆಳ್ತಂಗಡಿಯ ಶಾಸಕ ಕೆ. ವಸಂತ ಬಂಗೇರ ಅವರು ಮಾತನಾಡಿ ರಾಜ್ಯದ ಬಡವರ್ಗಕ್ಕೆ ಉಚಿತ ಅನ್ನ ಭಾಗ್ಯ ವನ್ನು ನೀಡಿದ ಸರಕಾರ ನಮ್ಮದು. ತಾಲೂಕಿನ ಹೋಬಳಿ ಕೇಂದ್ರ ಅನ್ನುವ ಕಾರಣದಿಂದ ಮತ್ತು ಇಲ್ಲಿನ ಅಗತ್ಯತೆಗಳ ಕಾರಣದಿಂದ ಈ ಭಾಗಕ್ಕೆ 8 ಕೋಟಿಗೂ ಮಿಕ್ಕಿ ಅತೀಹೆಚ್ಚು ಅನುದಾನ ವನ್ನು ಸರಕಾರದಿಂದ ತಂದಿದ್ದೇನೆ. ಕಾಂಗ್ರೆಸ್ ಸರಕಾರ ಬಡವರಿಗಾಗಿ ಮಾಡಿದಂತಹ ಕಾರ್ಯಕ್ರಮಗಳನ್ನು ಜನರು ಗುರುತಿಸುವಂತಾಗಬೇಕು, ಮತ್ತು ಇದನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.
ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಧರ್ಮಸ್ಥಳ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ. ಮಾತನಾಡಿ ಶುಭ ಕೋರಿದರು. ಈ ಸಂದರ್ಭ ಕೊಕ್ಕಡಕ್ಕೆ ಅತೀ ಹೆಚ್ಚು ಅನುದಾನಗಳನ್ನು ತಂದು ನೀಡಿದ ಶಾಸಕ ವಸಂತ ಬಂಗೇರ ಇವರಿಗೆ ಕೊಕ್ಕಡ ಗ್ರಾ.ಪಂ. ನ ಅಧ್ಯಕ್ಷ ಸದಸ್ಯರುಗಳು ಮತ್ತು ಅಧಿಕಾರಿಗಳು, ಕೊಕ್ಕಡ ಸಮಾನ ಮನಸ್ಕರ ವೇದಿಕೆಯಿಂದ ಶಾಲು ಹೊದೆಸಿ ಸನ್ಮಾನಿಸಲಾಯಿತು. ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಹಲವು ವರ್ಷಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ದಾದಿಯರಾದ ಮೇರಿ ಟಿ.ಎಂ., ವಿಕ್ಟೋರಿಯಾ ಕೆ.ಜೆ. ಇವರನ್ನು ಶಾಸಕರು ಮತ್ತು ವೈದ್ಯಾಧಿಕಾರಿಗಳು ಶಾಲು ಹೊದೆಸಿ ಸನ್ಮಾನಿಸಿದರು.
ಕೊಕ್ಕಡಕ್ಕೆ ಗ್ರಾ.ಪಂ. ಅಧ್ಯಕ್ಷರಾಗಿ ಅಧಿಕಾರ ಪಡೆದ ನಂತರ ಅತೀ ಹೆಚ್ಚು ಅನುದಾನಗಳನ್ನು ಶಾಸಕರ ಮೂಲಕ ತರಲು ಶ್ರಮಿಸಿದ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ಇವರನ್ನು ಕೊಕ್ಕಡದ ಸಮಾನ ಮನಸ್ಕರ ವೇದಿಕೆ ಯ ಪದಾಧಿಕಾರಿಗಳು ಮತ್ತು ಶಾಸಕರು ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯ ಜ್ಯೋತಿ, ಧರ್ಮಸ್ಥಳ ಕ್ಷೇತ್ರದ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳಾದ ಡಾ. ಎಂ. ರಾಮಕೃಷ್ಣ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ, ದ.ಕ. ಜಿ.ಪಂ. ನ ಜಂಟಿ ಕೃಷಿ ನಿರ್ದೇಶಕ ಹೆಚ್. ಕೆಂಪೇ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ. ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ಕೊಕ್ಕಡದ ವೈದ್ಯಾಧಿಕಾರಿ ಡಾ. ಪ್ರಕಾಶ್, ಕೆ.ಹೆಚ್.ಎಸ್. ಡಿ.ಆರ್.ಪಿ. ಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಘುಚಂದ್ರ ಹೆಬ್ಬಾರ್, ಸಹಾಯಕ ಕೃಷಿ ನಿರ್ದೇಶಕ ತಿಲಕ್ ಪ್ರಸಾದ್ ಜೀ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಸಾದ್ ಅಜಿಲ, ಸಣ್ಣ ನೀರಾವರಿ ಮಂಗಳೂರು ಉಪ ವಿಭಾಗದ ಸಹಾಯಕ ಕಾ. ಅಭಿಯಂತರ ಷಣ್ಮುಖಂ, ಕೊಕ್ಕಡ ಗ್ರಾ.ಪಂ. ಉಪಾಧ್ಯಕ್ಷೆ ಬಿ.ಕೆ. ರಾಧಾ, ಕೊಕ್ಕಡ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ರಾಜೀವಿ ಕೆ.ಶೆಟ್ಟಿ , ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ಕಡ ದ ಪ್ರಾಂಶುಪಾಲ ವೆಂಕಟೇಶ ಮೂರ್ತಿ,ಅರಸಿನಮಕ್ಕಿ ಗ್ರಾ.ಪಂ. ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ , ಕೊಕ್ಕಡ ಗ್ರಾ.ಪಂ. ಸದಸ್ಯರಾದ ವಿ.ಜೆ. ಮ್ಯಾಥ್ಯು, ಇಬ್ರಾಹಿಂ ಸೌತಡ್ಕ, ಶೀನ ನಾಯ್ಕ, ರವಿ ನಾಯ್ಕ್ , ಕುಶಾಲಪ್ಪ ಗೌಡ, ಪವಿತ್ರಾ ಕೆ., ಪದ್ಮಾ ಟಿ.ಎಂ., ಕುಸುಮಾ ಎ., ಪುಷ್ಪಲತಾ ಕೆ.ಟಿ.,ಭಾಗೀರಥಿ, ಸಿನಿ ಗುರುದೇವನ್, ಕೊಕ್ಕಡ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಕಾಶಿ ಅಣ್ಣಪ್ಪ ಗೌಡ, ಟಿ.ಕೆ. ಗುರುದೇವನ್, ಉಮ್ಮರ್ ಸೌತಡ್ಕ, ರಾಮಣ್ಣ ಗೌಡ ,ವಿನ್ಸೆಂಟ್ ಮಿನೇಜಸ್ ಉಪಸ್ಥಿತರಿದ್ದರು .ವೈದ್ಯಾಧಿಕಾರಿ ಡಾ.ಪ್ರಕಾಶ್ ಸ್ವಾಗತಿಸಿದರು. ತೋಟಗಾರಿಕಾ ಇಲಾಖಾಧಿಕಾರಿ ನಾರಾಯಣ ಪೂಜಾರಿ ವಂದಿಸಿದರು. ಕೃಷಿ ಇಲಾಖಾಧಿಕಾರಿ ಜಯಾನಂದ ಮತ್ತು ವಿನ್ಸೆಂಟ್ ಮಿನೇಜಸ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.