ಬೆಳ್ತಂಗಡಿ ಎ.ಪಿ.ಎಂ.ಸಿ ಚುನಾವಣೆ ನ.14 ನಾಮಪತ್ರ ಸಲ್ಲಿಕೆ ಕೊನೆ, ಡಿ.4ರಂದು ಚುನಾವಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

11 ಕೃಷಿ ಕ್ಷೇತ್ರಗಳು- ಮೀಸಲಾತಿ
ಬೆಳ್ತಂಗಡಿ – ಮಹಿಳೆ
ಉಜಿರೆ – ಸಾಮಾನ್ಯ
ಇಂದಬೆಟ್ಟು – ಅನುಸೂಚಿತ ಪಂಗಡ
ನೆರಿಯ – ಸಾಮಾನ್ಯ
ಕೊಕ್ಕಡ – ಅನುಸೂಚಿತ ಜಾತಿ
ಕಣಿಯೂರು – ಸಾಮಾನ್ಯ
ಮಚ್ಚಿನ – ಸಾಮಾನ್ಯ
ಮಡಂತ್ಯಾರು – ಮಹಿಳೆ
ವೇಣೂರು – ಹಿಂದುಳಿದ ವರ್ಗ ಬಿ
ನಾರಾವಿ – ಹಿಂದುಳಿದ ವರ್ಗ ಎ
ಅಳದಂಗಡಿ – ಸಾಮಾನ್ಯ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ೧೧ ಕೃಷಿಕರ ಕ್ಷೇತ್ರಗಳ ಸದಸ್ಯರ ಆಯ್ಕೆಗೆ ಡಿಸೆಂಬರ್ 4ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನ.7 ರಿಂದ ಆರಂಭಗೊಂಡಿದೆ.
ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಟ್ಟು 17 ಸದಸ್ಯ ಸ್ಥಾನವಿದೆ. ಇದರಲ್ಲಿ 11 ಮಂದಿ ಕೃಷಿಕರ ಕ್ಷೇತ್ರದಿಂದ ಆಯ್ಕೆಯಾಗಬೇಕಾಗಿದೆ. ಉಳಿದಂತೆ ವರ್ತಕರ ಕ್ಷೇತ್ರದಿಂದ ಒಬ್ಬರು, ಕೃಷಿ ಉತ್ಪನ್ನ ಸಹಕಾರಿಯಿಂದ ಒಬ್ಬರು, ಸಂಸ್ಕರಣಾ ಸಹಕಾರಿ ಸಂಘದಿಂದ ಒಬ್ಬರು ಆಯ್ಕೆಯಾಗಲಿದ್ದಾರೆ, ಮೂರು ಮಂದಿ ಸದಸ್ಯರು ಸರಕಾರದಿಂದ ನಾಮನಿರ್ದೇಶನ ಗೊಳ್ಳಲಿದ್ದಾರೆ. ಚುನಾವಣೆ ನಡೆಯಲಿ ರುವ ಕೃಷಿಕರ ಕ್ಷೇತ್ರದ 11 ಸ್ಥಾನಗಳಲ್ಲಿ ಅನುಸೂಚಿತ ಜಾತಿಗೆ ೧ಸ್ಥಾನ, ಅನುಸೂಚಿತ ಪಂಗಡಕ್ಕೆ 1ಸ್ಥಾನ, ಹಿಂದುಳಿದ ವರ್ಗ ಎ’ಗೆ 1ಸ್ಥಾನ, ಹಿಂದುಳಿದ ವರ್ಗ ಬಿ’ಗೆ 1ಸ್ಥಾನ, ಮಹಿಳೆಗೆ ೨ಸ್ಥಾನ, ಸಾಮಾನ್ಯರಿಗೆ ೫ ಸ್ಥಾನವನ್ನು ನಿಗದಿಗೊಳಿಸಿ ದ.ಕ ಜಿಲ್ಲಾಧಿ ಕಾರಿಯವರು ಆದೇಶ ನೀಡಿದ್ದಾರೆ.
11 ಮಂದಿ ಕೃಷಿಕರ ಕ್ಷೇತ್ರದ ಸದಸ್ಯರ ಆಯ್ಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನ.೧೪ರಂದು ಸೋಮವಾರ ಕೊನೆಯದಿನವಾಗಿದೆ. ನ.೧೫ರಂದು ನಾಮಪತ್ರಗಳ ಪರಿಶೀಲನೆ, ನ.18ರಂದು ನಾಮಪತ್ರಗಳ ಹಿಂತೆಗೆತಕ್ಕೆ ಕೊನೆಯ ದಿನವಾಗಿದೆ. ಡಿ.4ರಂದು ಆದಿತ್ಯವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಡಿ.6ರಂದು ಮಂಗಳವಾರ ಬೆಳಗ್ಗೆ 8ರಿಂದ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆದು ಸದಸ್ಯರ ಆಯ್ಕೆಯನ್ನು ಚುನಾವಣಾಧಿ ಕಾರಿಗಳು
ಘೋಷಿಸಲಿದ್ದಾರೆ.
ಕ್ಷೇತ್ರಗಳು ಹಾಗೂ ಮೀಸಲಾತಿ: ಬೆಳ್ತಂಗಡಿ ಕ್ಷೇತ್ರ- ಬೆಳ್ತಂಗಡಿ ಕೃಷಿಕರ ಕ್ಷೇತ್ರವನ್ನು ಮಹಿಳೆಗೆ ಮೀಸಲಿಡಲಾಗಿದ್ದು, ಈ ಕ್ಷೇತ್ರದಲ್ಲಿ ಒಟ್ಟು 3,805 ಮತದಾರರಿದ್ದಾರೆ. ಬೆಳ್ತಂಗಡಿ, ಮೇಲಂತಬೆಟ್ಟು, ಸವಣಾಲು, ಲಾಲ, ನಡ, ನಾವೂರು ಸೇರಿದಂತೆ 6 ಗ್ರಾಮಗಳು ಈ ಕ್ಷೇತ್ರ ವ್ಯಾಪ್ತಿಗೆ ಸೇರಿದೆ.
ಉಜಿರೆ ಕ್ಷೇತ್ರ- ಉಜಿರೆ ಕೃಷಿಕರ ಕ್ಷೇತ್ರವನ್ನು ಸಾಮಾನ್ಯರಿಗೆ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 4,337 ಮತದಾರರಿದ್ದಾರೆ. ಉಜಿರೆ, ಧರ್ಮಸ್ಥಳ, ಬೆಳಾಲು ಈ 3 ಗ್ರಾಮಗಳು ಈ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ.
ಇಂದಬೆಟ್ಟು ಕ್ಷೇತ್ರ- ಇಂದಬೆಟ್ಟು ಕೃಷಿಕರ ಕ್ಷೇತ್ರವನ್ನು ಅನುಸೂಚಿತ ಪಂಗಡಕ್ಕೆ ನಿಗದಿಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 4,442 ಮತದಾರರಿದ್ದು, ಇಂದಬೆಟ್ಟು, ಕನ್ಯಾಡಿ, ಮಲವಂತಿಗೆ, ಮಿತ್ತಬಾಗಿಲು, ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ ಸೇರಿದಂತೆ ಒಟ್ಟು 7 ಗ್ರಾಮಗಳು ಈ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ.
ನೆರಿಯ ಕ್ಷೇತ್ರ- ನೆರಿಯ ಕೃಷಿಕರ ಕ್ಷೇತ್ರವನ್ನು ಸಾಮಾನ್ಯರಿಗೆ ಮೀಸಲಿಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು ೪,೪೪೨ ಮತದಾರರಿದ್ದು, ನೆರಿಯ, ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ, ಪುದುವೆಟ್ಟು ಸೇರಿದಂತೆ 5 ಗ್ರಾಮಗಳು ಈ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ.
ಕೊಕ್ಕಡ ಕ್ಷೇತ್ರ- ಕೊಕ್ಕಡ ಕೃಷಿಕರ ಕ್ಷೇತ್ರವನ್ನು ಅನುಸೂಚಿತ ಜಾತಿಗೆ ನಿಗದಿಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 4,704 ಮತದಾರರಿದ್ದು, ಕೊಕ್ಕಡ, ಕಳೆಂಜ, ನಿಡ್ಲೆ, ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯ, ಪಟ್ರಮೆ ಸೇರಿದಂತೆ ಒಟ್ಟು 8 ಗ್ರಾಮಗಳು ಈ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ.
ಕಣಿಯೂರು ಕ್ಷೇತ್ರ- ಕಣಿಯೂರು ಕೃಷಿಕರ ಕ್ಷೇತ್ರವನ್ನು ಸಾಮಾನ್ಯರಿಗೆ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 5,193 ಮತದಾರರಿದ್ದು, ಕಣಿಯೂರು, ಇಳಂತಿಲ, ಬಂದಾರು, ಮೊಗ್ರು, ಉರುವಾಲು, ಕೊಯ್ಯೂರು ಸೇರಿದಂತೆ ೬ ಗ್ರಾಮಗಳು ಈ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ.
ಮಚ್ಚಿನ ಕ್ಷೇತ್ರ- ಮಚ್ಚಿನ ಕೃಷಿಕರ ಕ್ಷೇತ್ರವನ್ನು ಸಾಮಾನ್ಯರಿಗೆ ನಿಗದಿಪಡಿಸಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 4,167 ಮತದಾರರಿದ್ದು, ಮಚ್ಚಿನ, ಕರಾಯ, ತಣ್ಣೀರುಪಂತ, ತೆಕ್ಕಾರು, ಬಾರ್ಯ, ಪುತ್ತಿಲ ಸೇರಿದಂತೆ ೬ ಗ್ರಾಮಗಳು ಈ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ.
ಮಡಂತ್ಯಾರು ಕ್ಷೇತ್ರ- ಮಡಂತ್ಯಾರು ಕೃಷಿಕರ ಕ್ಷೇತ್ರವನ್ನು ಮಹಿಳೆಗೆ ಮೀಸಲಿರಿಸಲಾಗಿದೆ. ಈ ಕ್ಷೇತ್ರದಲ್ಲಿ 4,888 ಮತದಾರರಿದ್ದು, ಕಳಿಯ, ನ್ಯಾಯತರ್ಪು, ಮಾಲಾಡಿ, ಸೋಣಂದೂರು, ಪಾರೆಂಕಿ, ಕುಕ್ಕಳ, ಕುವೆಟ್ಟು, ಓಡಿಲ್ನಾಳ ಸೇರಿದಂತೆ 8 ಗ್ರಾಮಗಳು ಈ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ.
ವೇಣೂರು ಕ್ಷೇತ್ರ- ವೇಣೂರು ಕೃಷಿಕರ ಕ್ಷೇತ್ರವನ್ನು ಹಿಂದುಳಿದ ವರ್ಗ ಬಿ’ಗೆ ನಿಗದಿಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ 5,703 ಮತದಾರರಿದ್ದು, ವೇಣೂರು, ಬಜಿರೆ, ಗುಂಡೂರಿ, ಮೂಡುಕೋಡಿ, ಕರಿಮಣೇಲು, ಕುಕ್ಕೇಡಿ, ನಿಟ್ಟಡೆ, ಹೊಸಂಗಡಿ, ಬಡೆಕೋಡಿ, ಆರಂಬೋಡಿ, ಪಡಂಗಡಿ, ಗರ್ಡಾಡಿ ಸೇರಿದಂತೆ 12 ಗ್ರಾಮಗಳು ಈ ಕ್ಷೇತ್ರ ವ್ಯಾಪ್ತಿಗೆ ಸೇರಿದೆ.
ನಾರಾವಿ ಕ್ಷೇತ್ರ- ನಾರಾವಿ ಕೃಷಿಕರ ಕ್ಷೇತ್ರವನ್ನು ಹಿಂದುಳಿದ ವರ್ಗ ಎ’ಗೆ ಮೀಸಲಿರಿಸಲಾಗಿದೆ. ಈ ಕ್ಷೇತ್ರದಲ್ಲಿ 6,207 ಮತದಾರರಿದ್ದು, ನಾರಾವಿ, ಕುತ್ಲೂರು, ಮರೋಡಿ, ಪೆರಾಡಿ, ಕಾಶಿಪಟ್ಣ, ಅಂಡಿಂಜೆ, ಸಾವ್ಯ, ಕೊಕ್ರಾಡಿ, ಕುದ್ಯಾಡಿ, ಸುಲ್ಕೇರಿ, ನಾವರ ಸೇರಿದಂತೆ 11 ಗ್ರಾಮಗಳು ಈ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ.
ಅಳದಂಗಡಿ ಕ್ಷೇತ್ರ- ಅಳದಂಗಡಿ ಕೃಷಿಕರ ಕ್ಷೇತ್ರವನ್ನು ಸಾಮಾನ್ಯರಿಗೆ ನಿಗದಿಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 4,132 ಮತದಾರರಿದ್ದು, ಬಡಗಕಾರಂದೂರು, ಪಿಲ್ಯ, ಶಿರ್ಲಾಲು, ಸುಲ್ಕೇರಿಮೊಗ್ರು, ಕರಂಬಾರು, ಬಳೆಂಜ, ತೆಂಕಕಾರಂದೂರು, ನಾಲ್ಕೂರು, ಮುಂಡೂರು ಸೇರಿದಂತೆ ಒಟ್ಟು ೯ ಗ್ರಾಮಗಳು ಈ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.