ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಅಭಿನಂದನೆ

Exif_JPEG_420

ಬೆಳ್ತಂಗಡಿ : ಇತ್ತೀಚೆಗೆ ನಿವೃತ್ತರಾದ ಬೆಳ್ತಂಗಡಿ ತಾಲೂಕಿನ ಪದ್ಮುಂಜ, ಮಡಂತ್ಯಾರು, ವೇಣೂರಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪುರಂಧರ ಶೆಟ್ಟಿ, ಶ್ರೀಮತಿ ತುಳಸಿ ಹಾಗು ಅಬ್ದುಲ್ ರಹಿಮಾನ್ ರವರನ್ನು ದ ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದ.ಕ ಜಿಲ್ಲಾ ಸಹಕಾರಿ ಯೂನಿಯನ್‌ನ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಾವಿತ್ರಿ ರೈ ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ನಿರಂಜನ ಬಾವಂತಬೆಟ್ಟು ವಹಿಸಿ, ಅಧಿಕಾರಿಗಳು ಸಹಕಾರಿ ಕಾಯಿದೆ ನಿಯಮವನ್ನು ಅನುಸರಿಸಿ ವ್ಯವಹರಿಸುವಂತೆ ಕರೆ ನೀಡಿ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ವಲಯದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಮಂಜುನಾಥ ಮಾತನಾಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸರಕಾರ, ಆಡಳಿತ ಮಂಡಳಿ ಹಾಗೂ ಸದಸ್ಯರ ಜೊತೆ ಕೆಲಸ ನಿರ್ವಹಿಸಿ ನಿವೃತ್ತನಾಗುವುದು ದೊಡ್ಡ ಸವಾಲೆಂದು ಹೇಳಿ ನಿವೃತ್ತರಿಗೆ ಶುಭ ಕೋರಿದರು. ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ಬೆಳ್ತಂಗಡಿ ಶಾಖಾ ಮೆನೇಜರ್ ಪ್ರಮೋದ್ ಕುಮಾರ್, ಸಹಕಾರಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಕನ್ಯಾ ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರಾದ ಸಿರಾಜುದ್ದೀನ್, ಸಂದೇಶ ಎಮ್ ಉಪಸ್ಥಿತರಿದ್ದರು. ಬಂಗಾಡಿ ಪೇಕ್ಸ್‌ನ ಸಿಇಒ ಉಮೇಶ ಎ.ಬಿ ನಿವೃತ್ತರ ಪರಿಚಯ ಹಾಗೂ ಶುಭ ಕೋರಿದರು. ತಾಲೂಕಿನ ಪೇಕ್ಸ್‌ಗಳ ಪರವಾಗಿ ಗುರುವಾಯನಕೆರೆ ಪೆಕ್ಸ್ ನ ಸಿಇಒ ಅನಂತರಾಜ್ ಜೈನ್ ಹಾಗೂ ಕಳಿಯದ ಹರಿಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದ್ದರು. ಸುಲ್ಕೆರಿಮೊಗ್ರು ಪೇಕ್ಸ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಮುಂಡಾಜೆ ಪೇಕ್ಸ್‌ನ ನಾರಾಯಣ ಫಡ್ಕೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.