ರಾಷ್ಟ್ರ – ರಾಜ್ಯಮಟ್ಟದ ಚೆಸ್ ಸ್ಪರ್ಧೆ ಇಶಾ ಶರ್ಮಾ ಸಹೋದರಿಯರ ವಿಕ್ರಮ

Isha and Siri Sharma copyಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಇಶಾ ಶರ್ಮಾ ಹಾಗೂ ಸಿರಿ ಶರ್ಮಾ ಸಹೋದರಿಯರು ರಾಷ್ಟ್ರ ಹಾಗೂ ರಾಜ್ಯಮಟ್ಟದ 19ರೊಳಗಿನ ವಯಸ್ಸಿನ ವಿದ್ಯಾರ್ಥಿನಿಯರ ಚೆಸ್ ಪಂದ್ಯಾಟದಲ್ಲಿ ಹಲವು ವಿಕ್ರಮಗಳನ್ನು ಸಾಧಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಹೈದರಾಬಾದ್‌ನಲ್ಲಿ ಸ್ಕೂಲ್‌ಗೇಮ್ ಫೆಡರೇಷನ್ ಆಫ್ ಇಂಡಿಯಾ ಇವರು ಆಯೋಜಿಸಿದ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಇಶಾ ಶರ್ಮಾ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾಳೆ.
ಅಮೈಟಿ ಯುನಿವರ್ಸಿಟಿಯವರು ಕೋಲ್ಕತ್ತಾದಲ್ಲಿ ಆಯೋಜಿಸಿದ ಚೆಸ್ ಸ್ಫರ್ಧೆಯಲ್ಲಿ ಇಶಾ ಶರ್ಮಾ ೧೪ನೇ ಸ್ಥಾನ ಪಡೆದಿದ್ದಾರೆ.
ಆಂದ್ರಪ್ರದೇಶದ ರಾಜಮಂಡ್ರಿಯಲ್ಲಿ ಆಸೆಂಟ್ ಸ್ಪೋರ್ಟ್ಸ್ ಫೌಂಡೇಶನ್ ಆಯೋಜಿಸಿದ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟದಲ್ಲಿ ಇಶಾ ಶರ್ಮಾ ೧೩ನೇ ಸ್ಥಾನ ಪಡೆದಿದ್ದಾಳೆ. ಹಾಗೆಯೇ ಸಿರಿಶರ್ಮಾ ಈ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾಳೆ
ಶಿವಮೊಗ್ಗದಲ್ಲಿ ರೋಟರಿಕ್ಲಬ್ ಶಿವಮೊಗ್ಗ ಏರ್ಪಡಿಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಇಶಾಶರ್ಮಾ ಪ್ರಥಮ ಪ್ರಶಸ್ತಿ ಪಡೆದಿರುತ್ತಾರೆ ಹಾಗೆಯೇ ಸಿರಿಶರ್ಮಾ ಭಾಗವಹಿಸಿರುತ್ತಾರೆ.
ಕಲ್ಬುರ್ಗಿಯಲ್ಲಿ ಇನ್ನರ್‌ವೀಲ್ ಚೆಸ್ ಕ್ಲಬ್ ಆಯೋಜಿಸಿದ ರಾಜ್ಯಮಟ್ಟದ ಚೆಸ್ ಸ್ಪರ್ಧೆಯಲ್ಲಿ ಇಶಾಶರ್ಮಾ ಪ್ರಥಮ ಪ್ರಶಸ್ತಿ ಪಡೆದಿರುತ್ತಾರೆ.
ರಾಯಚೂರಿನ ಸಿಂಧನೂರಿನಲ್ಲಿ ಡುಡ್ಡುಪುಡಿ ಕಾಲೇಜು ಆಯೋಜಿಸಿದ ರಾಜ್ಯಮಟ್ಟದ ಚೆಸ್ ಸ್ಪರ್ಧೆಯಲ್ಲಿ ಇಶಾಶರ್ಮಾ ಪ್ರಥಮ ಸ್ಥಾನ ಹಾಗೂ ಸಿರಿಶರ್ಮಾ ಏಳನೇ ಸ್ಥಾನ ಪಡೆದಿರುತ್ತಾರೆ.
ಇವರೀರ್ವರೂ ಡಾ. ಶ್ರೀಹರಿ ಕೆ. ಮತ್ತು ಡಾ. ವಿದ್ಯಾಗೌರಿ ದಂಪತಿಗಳ ಸುಪುತ್ರಿಯರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.