ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಡೆಯಲಿ : ತಹಶೀಲ್ದಾರ್

Kannada rajyosthava copyಬೆಳ್ತಂಗಡಿ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವು ನ.1ರಂದು ವಾಣಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಹೆಚ್.ಕೆ. ತಿಪ್ಪೇಸ್ವಾಮಿ ಅವರು ಧ್ವಜಾರೋಹಣವನ್ನು ನೆರವೇರಿಸಿ, ಸಂದೇಶ ನೀಡಿ, ಕನ್ನಡ ನಾಡಿನಲ್ಲಿ ಬೇರೆ, ಬೇರೆ ಜಾತಿ, ಮತ ಧರ್ಮದವರು ವಾಸವಿದ್ದು, ಈ ನೆಲದ ಭಾಷೆ, ಸಂಸ್ಕೃತಿಯನ್ನು ಉಳಿಸುವ ಕೆಲಸಗಳಾಗಬೇಕು, ಕನ್ನಡ ಭಾಷೆಯ ಮೇಲೆ ಅಭಿಮಾನವಿರಲಿ, ಕನ್ನಡ ನಿತ್ಯೋತ್ಸವವಾಗಬೇಕು ಎಂದು ಹೇಳಿದರು.
ಉದಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಲಕ್ಷ್ಮೀ ಮಚ್ಚಿನ ಅವರು ಪ್ರಧಾನ ಭಾಷಣ ಮಾಡಿ ಕನ್ನಡ ನಾಡಿನಲ್ಲಿ ಎಲ್ಲಾ ಭಾಷೆಗಳ ಅಧಿಪತ್ಯ ಜಾಸ್ತಿಯಾಗಿ ಕನ್ನಡವನ್ನು ಹುಡುಕಬೇಕಾದ ಸನ್ನಿವೇಶ ಎದುರಾಗಿದೆ. ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಶಾಲೆಗಳು ಮುಚ್ಚುಗಡೆಯಾಗುತ್ತಿದ್ದು, ಇತರ ರಾಜ್ಯಗಳಲ್ಲಿರುವಂತೆ ಕನ್ನಡದ ಬಗ್ಗೆ ನಮ್ಮಲ್ಲಿ ಅಭಿಮಾನ ಕಡಿಮೆಯಾಗುತ್ತಿದೆ ಎಂದರು. ನೆಲ, ಜಲ ಉಳಿದರೆ ಮಾತ್ರ ನಮ್ಮ ಭಾಷೆ ಉಳಿಯಲು ಸಾಧ್ಯವಿದೆ. ಕಾವೇರಿ ನದಿ ನೀರಿನ ವಿವಾದದ ಬಗ್ಗೆ ಸರಕಾರ ವಹಿಸಿದ ಕಾಳಜಿಯನ್ನು ನೇತ್ರಾವತಿ ನದಿ ನೀರಿನ ವಿವಾದಕ್ಕೆ ತೆಗೆದುಕೊಂಡಿಲ್ಲ, ಕನ್ನಡ ಆಡಳಿತ ಭಾಷೆ ಎಂಬುದು ಕೇವಲ ಆದೇಶದಲ್ಲೇ ಉಳಿದಿದೆಯೇ ಹೊರತು ಇದುವರೆಗೂ ಅನುಷ್ಠಾನವಾಗಿಲ್ಲ, ಕನ್ನಡ ನಾಡು, ಭಾಷೆ ಉಳಿಯಲು ನಾವೆಲ್ಲ ಸಂಘಟಿತರಾ ಗಬೇಕು ಎಂದು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.