ಜೆಸಿಐ ವಲಯ ಸಮ್ಮೇಳನ : ಮಂಜುಶ್ರೀ ಜೇಸಿಸ್‌ಗೆ ಸಮಗ್ರ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1

jci manjushri ge prasasti copyಬೆಳ್ತಂಗಡಿ : ಉಡುಪಿಯಲ್ಲಿ ನಡೆದ ಜೆಸಿಐ ಇಂಡಿಯಾದ ವಲಯ 15ರ ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ವಲಯ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ರಾಷ್ಟ್ರೀಯ ಸ್ವಚ್ಛ ಭಾರತ ಅಭಿಯಾನದಲ್ಲಿ ರನ್ನರ್ ಪ್ರಶಸ್ತಿಯೊಂದಿಗೆ ಹಲವು ವಲಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ಘಟಕದ ವಿವಿಧ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಗುರುತಿಸಿ ಈ ಸಂದರ್ಭ ಗೌರವಿಸಲಾಯಿತು. ಬೆಳ್ತಂಗಡಿ ಜೆಸಿಐ ವತಿಯಿಂದ ನಡೆದ ರಾಷ್ಟ್ರೀಯ ಸ್ವಚ್ಛ ಭಾರತ ಅಭಿಯಾನ ಕಾಯಕ್ರಮಕ್ಕೆ ರನ್ನರ್ ಪ್ರಶಸ್ತಿ, ಘಟಕ ಕಾರ್ಯಚಟುವಟಿಕೆಗಳಿಗೆ ಸೂಪರ್ ಘಟಕ ಪ್ರಶಸ್ತಿ, ಮೀಡಿಯ ಕವರೇಜ್ ವಲಯದ ವಿನ್ನರ್ ಪ್ರಶಸ್ತಿ, ಪರಿಸರ ಸಪ್ತಾಹ ಗೋ ಗ್ರೀನ್ ಕಾರ್ಯಕ್ರಮದ ಪ್ರಶಸ್ತಿಯೊಂದಿಗೆ ಹಲವು ಮನ್ನಣೆಗಳು ಈ ಸಂದರ್ಭದಲ್ಲಿ ದೊರೆಯಿತು. ವಲಯಾಧ್ಯಕ್ಷರಾದ ಸಂದೀಪ್ ಕುಮಾರ್, ವಲಯ ನಿಕಟಪೂರ್ವಾಧ್ಯಕ್ಷ ಕೃಷ್ಣಮೋಹನ್ ಪಿ.ಎಸ್, ಆಡಳಿತ ನಿರ್ದೇಶಕ ಸಂತೋಷ್ ಜಿ. ಜಿಸಿಐ ಇಂಡಿಯಾದ ಅಧಿಕಾರಿಗಳು, ವಲಯಾಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕಾರ ಸಂಭ್ರಮದಲ್ಲಿ ಘಟಕಾಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಇವರ ಜತೆ ವಲಯ ಕಾರ್ಯಕ್ರಮ ನಿರ್ದೇಶಕರಾದ ಚಿದಾನಂದ ಇಡ್ಯಾ, ಕಾರ್ಯದರ್ಶಿ ಪ್ರಶಾಂತ್ ಲಾಲ, ಪೂರ್ವಾಧ್ಯಕ್ಷರಾದ ಕೇಶವ ಪೈ, ನಾರಾಯಣ ಶೆಟ್ಟಿ, ಶ್ರೀನಾಥ್ ಕೆ.ಎಂ., ಉಪಾಧ್ಯಕ್ಷರಾದ ಸಂತೋಷ್ ಕೋಟ್ಯಾನ್, ಅಭಿನಂದನ್ ಹರೀಶ್, ಕೋಶಾಧಿಕಾರಿ ಸ್ವರೂಪ್, ಜೆಸಿಗಳಾದ ಪ್ರೀತಂ ಶೆಟ್ಟಿ, ಅನುಶ್ಚಂದ್ರ, ರಕ್ಷಿತ್ ಶೆಟ್ಟಿ, ಗುರುರಾಜ್, ರತೀಶ್ ರಾವ್ ಉಪಸ್ಥಿತರಿದ್ದರು. ಉಡುಪಿಯಲ್ಲಿ ಜರಗಿದ ಎರಡು ದಿನಗಳ ಈ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿಯ ಹಲವಾರು ಕಾರ್ಯಕ್ರಮಗಳು ವಲಯದ ಹಾಗೂ ಜೆಸಿಐ ಇಂಡಿಯಾದ ಮೆಚ್ಚುಗೆ ಗಳಿಸಿದವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.