ನ.2 ರಂದು ವಿಶ್ವಕರ್ಮ ಸಹಕಾರ ಬ್ಯಾಂಕ್ ಸ್ಥಳಾಂತರ

  ಉಜಿರೆ : ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ಮಂಗಳೂರು ಇದರ ಉಜಿರೆ ಶಾಖೆಯು ಉಜಿರೆ ಜನಾರ್ಧನ ದೇವಸ್ಥಾನದ ಬಳಿ ಇರುವ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಚರಿಸುತ್ತಿದ್ದು ಇದೀಗ ಶ್ರೀ ರಾಮ್ ಕಾಂಪ್ಲೆಕ್ಸ್ 1ನೇ ಮಹಡಿಗೆ ಸರ್ವಸುಸಜ್ಜಿತವಾದ ನೂತನ ಕೊಠಡಿಗೆ ನ.2 ರಂದು ಸ್ಥಳಾಂತರಗೊಂಡು ಉದ್ಘಾಟನೆಗೊಳ್ಳಲಿದೆ.
ಉದ್ಘಾಟನೆಯನ್ನು ಶಾಸಕರಾದ ಕೆ. ವಸಂತ ಬಂಗೇರ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ದ.ಕ ಜಿಲ್ಲಾ ಸಹಕಾರಿ ಯುನಿಯಾನ್ ಬ್ಯಾಂಕ್ ಉಪಾಧ್ಯಕ್ಷ ಸುಂದರ ಗೌಡ ಇಚ್ಚಿಲ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಬಿ. ನಿರಂಜನ್, ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಮುಂಡಾಜೆ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎನ್.ಎಸ್. ಗೋಖಲೆ, ವಿಶ್ವಕರ್ಮ ಸಂಘ ಅಧ್ಯಕ್ಷ ಬಿ.ಕೆ ಸತೀಶ್, ಸೋಮನಾಥ ಬಂಗೇರ ವರ್ಪಳೆ ಭಾಗವಹಿಸುವರು. ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಹರೀಶ್ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.