HomePage_Banner_
HomePage_Banner_
HomePage_Banner_

ಸೋಜಾ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಮಳಿಗೆಯಲ್ಲಿ ದೀಪಾವಳಿ ಸ್ಪೆಷಲ್ ಸೇಲ್ಸ್ – ಬಂಪರ್ ಬಹುಮಾನ ಗೆಲ್ಲುವ ಅವಕಾಶ

souza news (1) copyಬೆಳ್ತಂಗಡಿ : ಎಲೆಕ್ಟ್ರಾನಿಕ್ಸ್ ವ್ಯವಹಾರದಲ್ಲಿ ವಿಶ್ವಾಸಭರಿತ 21 ವರ್ಷಗಳ ಸುದೀರ್ಘ ವ್ಯವಹಾರದ ಮೂಲಕ ಉತ್ಕೃಷ್ಟ ಉತ್ಪನ್ನಗಳ ವಿಶ್ವಾಸಾರ್ಹ ಮಳಿಗೆ, ಗ್ರಾಹಕರ ವಿಶ್ವಾಸ ಗಳಿಸಿ ಇಷ್ಟೂ ವರ್ಷಗಳಲ್ಲಿ ಕೋಟಿ ಗ್ರಾಹಕರ ಮನ ಗೆದ್ದಿರುವ ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿಯಲ್ಲಿ ದೀಪಾವಳಿ ಪ್ರಯುಕ್ತ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‌ಗಳ ವಿಶೇಷ ಮಾರಾಟ ಮೇಳ ನ.10ರ ವರೆಗೆ ನಡೆಯಲಿದೆ. ವಿಶೇಷವಾಗಿ ಒನಿಡಾ ಕಂಪೆನಿಯ ಯಾವುದೇ ಖರೀದಿಗೆ ಕಾರುಗಳು, ಸ್ಮಾರ್ಟ್ ಎಲ್‌ಇಡಿ ಟಿ. ವಿ ಮತ್ತು ಇತರ ಭಾರೀ ಬಹುಮಾನಗಳನ್ನು ಗೆಲ್ಲುವ ಅವಕಾಶ ಅದೃಷ್ಟವಂತ ಗ್ರಾಹಕರಿಗಿದೆ. ಸೋನಿ, ಸ್ಯಾಮ್‌ಸಂಗ್, ವರ್ಲ್‌ಫೂಲ್, ಮೊದಲಾದ ಜಗತ್ಪ್ರಸಿದ್ಧ ಬ್ರಾಂಡ್‌ಗಳ ಉತ್ಪನ್ನಗಳು, ಮಿಕ್ಸಿ, ಗ್ರೈಂಡರ್, ಟಿ ವಿ ಸ್ಟ್ಯಾಂಡ್‌ಗಳೂ ಸೇರಿದಂತೆ ಕನ್ನಡಿ ಮತ್ತು ಮರದ ಗೃಹೋಪಯೋಗಿ ಫರ್ನಿಚರ್‌ಗಳು, ಚೈನಾ ಮಾದರಿಯ ಮನೆ ಮನಕ್ಕೊಪ್ಪುವ ರೆಡಿಮೆಡ್ ಫರ್ನಿಚರ್‌ಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ.  ಹಬ್ಬದ ಪ್ರಯುಕ್ತ ನ. ೩೦ ರ ರವಿವಾರವೂ ಮಳಿಗೆ ತೆರೆದಿರುತ್ತದೆ ಹಾಗೂ ಬಾಜಾಜ್ ಫೈನಾನ್ಸ್‌ನಿಂದ ಸ್ಥಳದಲ್ಲೇ ಸಾಲಸೌಲಭ್ಯ ೦% ಬಡ್ಡಿದರದಲ್ಲಿ. ಎಂದು ಸಂಸ್ಥೆಯ ಆಡಳಿತ ಪಾಲುದಾರ ಆಲ್ಫೋನ್ಸ್ ಫ್ರಾಂಕೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.