ಅಳದಂಗಡಿ ನ್ಯೂ ತ್ರಿಲೋಕ್ ಡ್ಯಾನ್ಸ್ ಕ್ಲಾಸ್ ಹಾಗೂ ಭ್ರಾಮರಿ ನಾಟ್ಯಾಲಯ ಶುಭಾರಂಭ

new thrilok copyಅಳದಂಗಡಿ : ಉಜಿರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಸಿದ್ಧ ಡ್ಯಾನ್ಸ್ ಕ್ಲಾಸ್ ನೀಡುವ ಸಂಸ್ಥೆಯಲ್ಲೊಂದು ನ್ಯೂ ತ್ರಿಲೋಕ್ ಡ್ಯಾನ್ಸ್ ಇನ್‌ಸ್ಟ್ಯೂಟಿವ್‌ನ ಸಹ ಸಂಸ್ಥೆಯಾದ ನ್ಯೂ ತ್ರಿಲೋಕ್ ಡ್ಯಾನ್ಸ್ ಇನ್ಸ್‌ಸ್ಟ್ಯೂಟಿವ್ ಹಾಗೂ ಭ್ರಾಮರಿ ನಾಟ್ಯಾಲಯ ಅ.10ರಂದು ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಚರ್ಚ್ ಸ್ಕೂಲ್ ಹತ್ತಿರ ಜ್ಞಾನಮಾರ್ಗದಲ್ಲಿರುವ ಯುವಕ ಮಂಡಲದಲ್ಲಿ ಶುಭಾರಂಭಗೊಂಡಿತು. ಸಂಸ್ಥೆಯ ಉದ್ಘಾಟನೆಯನ್ನು ಭರತನಾಟ್ಯ ಗುರು ವಿದುಷಿ ವಿದ್ಯಾ ಮನೋಜ್‌ರವರು ನೆರವೇರಿಸಿ ಸಂಸ್ಥೆಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಶ್ರೀನಿವಾಸ್ ಯೋಗಕ್ಷೇಮ, ಗುರುಮಿತ್ರ ಸಮೂಹದ ರಮಾನಂದ ಪೂಜಾರಿ, ಮಧುಕರ ಬಳಂಜ, ದಿನೇಶ್ ಪೂಜಾರಿ ಅಂತರ, ವಿಜಯ ಕುಮಾರ್ ಜೈನ್, ಜಗದೀಶ್ ರೈ ಪಾಂಡ್ಯೋಟ್ಟು, ಧನಂಜಯ ಜೈನ್ ಅಳದಂಗಡಿ, ಸುಜೀತ್ ಕುಮಾರ್ ಹಾಗೂ ವಿದ್ಯಾರ್ಥಿಗಳ ಹೆತ್ತವರು, ಮಿತ್ರರು ಉಪಸ್ಥಿತರಿದ್ದರು. ಸಂಸ್ಥೇಯಲ್ಲಿ ವೆಸ್ಟರ್ನ್ ಡ್ಯಾನ್ಸ್ ಕ್ಲಾಸ್ ಪ್ರತಿ ಸೋಮವಾರ ಹಾಗೂ ಮಂಗಳವಾರ 5.00ರಿಂದ 6.30ರವರೆಗೆ ನಡೆಯಲಿದೆ. ಹಾಗೆಯೇ ಭರತನಾಟ್ಯ ಕ್ಲಾಸ್ ಪ್ರತಿ ಶನಿವಾರ 3.00ರಿಂದ 5ರವರೆಗೆ ನಡೆಯಲಿರುವುದು ಎಂದು ಸಂಸ್ಥೆಯ ಮಾಲಕರಾದ ಸುಧೀರ್ ಜೈನ್ ಬಳಂಜ, ಅರುಣ್ ಜೈನ್ ಅಳದಂಗಡಿ, ವಿದುಷಿ ರಾಜಶ್ರೀ ಎಂ.ಭಟ್ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.