ಕುಂಟಾಲಪಲ್ಕೆ: ಶಾಲಾ ಸಮುದಾಯದತ್ತ ಕಾರ್ಯಕ್ರಮ ಹಾಗೂ ವಿಶ್ವ ಕೈ ತೊಳೆಯುವ ದಿನಾಚರಣೆ..

Advt_NewsUnder_1
Advt_NewsUnder_1

shaale 1

shaale

ಬಂದಾರು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಲಪಲ್ಕೆಯಲ್ಲಿ 2016-17 ನೆ ಸಾಲಿನ ಮೊದಲ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಮಣ್ಣಗೌಡರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಸರ್ಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿಯ ವಿಜ್ಞಾನ ಶಿಕ್ಷಕರಾದ ವಿವೇಕಾನಂದ ಗೌಡ ಬಿ.ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ವಿಶೇಷವಾಗಿ ‘ವಿಶ್ವ ಕೈ ತೊಳೆಯುವ ದಿನಾಚರಣೆ’ ಆಚರಿಸಲಾಯಿತು.ಇದರ ಮಹತ್ವದ ಬಗ್ಗೆ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕರಾದ ಸುರೇಶ್.ಎಂ.,’ಪೋಷಕರು ವೈಯಕ್ತಿಕ ಸ್ವಚ್ಚತೆಗೆ ಆದ್ಯತೆ ನೀಡುವುದರ ಮೂಲಕ ಮಕ್ಕಳಿಗೆ ಮಾದರಿಯಾಗಬೇಕು.ಕೈಯನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಲು ಸಾಧ್ಯ’ ಎಂದರು.ಕಾರ್ಯಕ್ರಮದಲ್ಲಿ ಬಂದಾರು ಗ್ರಾ.ಪಂ.ಸದಸ್ಯೆ ಲಲಿತ ಬದ್ಯಾರು, ಎಸ್.ಡಿ.ಎಂ.ಸಿ.ಸದಸ್ಯ ಉಮೇಶ್ ಗೌಡ ಸೇರಿದಂತೆ ಹೆಚ್ಚಿನ ಪೋಷಕರು,ಶಿಕ್ಷಕರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಹ ಶಿಕ್ಷಕಿ ತೇಜಸ್ವಿನಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಗೌರವ ಶಿಕ್ಷಕಿ ಹರಿಣಾಕ್ಷಿ ಎನ್. ಸ್ವಾಗತಿಸಿ,ಲೀಲಾವತಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.