ಎಸ್.ಎಸ್.ಎಫ್ ಬೆಳ್ತಂಗಡಿ ಸೆಕ್ಟರ್ ವತಿಯಿಂದ ಯುನಿಟ್ ಮೀಟ್

Advt_NewsUnder_1
Advt_NewsUnder_1

yunitಎಸ್.ಎಸ್.ಎಫ್ ಬೆಳ್ತಂಗಡಿ ಸೆಕ್ಟರ್ ವತಿಯಿಂದ ಯುನಿಟ್ ಲೀಡರ್ಸ್ ಮೀಟ್ ಕಾರ್ಯಕ್ರಮವು ಅಂಬೆಡ್ಕರ್ ಭವನದಲ್ಲಿ ಅ. 9 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸೆಕ್ಟರಿಗೊಳಪ್ಪಟ್ಟ 10 ಯುನಿಟುಗಳ ಪದಾಧಿಕಾರಿಗಳು ಬಾಗವಹಿಸಿದ್ದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಸೆಕ್ಟರ್ ಅದ್ಯಕ್ಷ ಯೂಸುಫ್ ಮದನಿ ಕೊಯ್ಯೂರು ವಹಿಸಿದ್ದರು. ಕಾರ್ಯಕ್ರಮವನ್ನು ಡಿ.ಎಂ.ಕಮಾಲ್ ಮುಸ್ಲಿಯಾರ್ ಉದ್ಘಾಟಿಸಿದರು. ನಂತರ ಡಿವಿಷನ್ ಉಪಾದ್ಯಕ್ಷ ಉಮರ್ ಸಅದಿ ಸಂದೇಶ ಬಾಷಣ ಮಾಡಿದರು. ಮುಖ್ಯ ಭಾಷಣ ಮಾಡಿದ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಖಾಫಿ ಸಂಘಟನೆಯ ಸದಸ್ಯತ್ವ ಅಭಿಯಾನ ಹಾಗೂ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಡಿವಿಷನ್ ನಾಯಕ ನಝೀರ್ ಪೆರ್ದಾಡಿ ಹಾಗೂ ಸೆಕ್ಟರ್ ನಾಯಕರಾದ ರಝಾಕ್ ಲೈಲಾ, ಸಿನಾನ್ ಇಂದಬೆಟ್ಟು, ಉಸ್ಮಾನ್ ಮಲೆಬೆಟ್ಟು, ಸಲೀಂ ಪೆರ್ದಾಡಿ ಹಾಗೂ 10 ಯುನಿಟಿನಿಂದ ಬಂದ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮವು ಶೌಕತ್ ಇಂದಬೆಟ್ಟು ಇವರ ದನ್ಯವಾದೊಂದಿಗೆ ಮುಕ್ತಾಯವಾಯಿತು. ಪ್ರ. ಕಾರ್ಯದರ್ಶಿ ಶರೀಫ್ ನಾವೂರು ರೋಯಲ್ ಫ್ಯಾಶನ್ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.