HomePage_Banner_
HomePage_Banner_
HomePage_Banner_

ಧರ್ಮಸ್ಥಳ ನೇತ್ರಾವತಿ ಗ್ರಾಮ ಅರಣ್ಯ ಸಮಿತಿ ವಾರ್ಷಿಕ ಮಹಾಸಭೆ – ಸಂಜೀವಿನಿ ವನ ಉದ್ಘಾಟನೆ

sanjivini vana copy

sanjivini vana1 copy

ಧರ್ಮಸ್ಥಳ : ಕರ್ನಾಟಕ ಸರಕಾರ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಬೆಳ್ತಂಗಡಿ ಅರಣ್ಯ ವಲಯ, ಕರ್ನಾಟಕ ರಾಜ್ಯ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವ ವೈವಿಧ್ಯ ಸಂರಕ್ಷಣಾ ಯೋಜನೆ , ನೇತ್ರಾವತಿ ಗ್ರಾಮ ಅರಣ್ಯ ಸಮಿತಿ ಧರ್ಮಸ್ಥಳ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಕಾರ್ಯನಿರ್ವಹಣೆ ಸಮಿತಿ ಆಯ್ಕೆ ಮತ್ತು ಟಿ.ಟಿ.ಎಂ.ಪಿ.ಡಿ ಯೋಜನೆಯ ಸಂಜೀವಿನಿ ವನ ಉದ್ಘಾಟನಾ ಕಾರ್ಯಕ್ರಮ ಸೆ.29ರಂದು ನಡೆಯಿತು.
ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಈ ಯೋಜನೆಯಲ್ಲಿ ಸಂಜೀವಿನಿ ವನದ ನಿರ್ಮಾಣವಾಗಿದ್ದು, ಗಿಡಮೂಲಿಕೆಗಳ ಉಳಿವಿಗೆ ಇದು ಉತ್ತಮ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಅರಣ್ಯ ಸಮಿತಿ ಅಧ್ಯಕ್ಷ ಶ್ರೀಕಾಂತ್‌ರಾವ್ ಮಾತನಾಡಿ ಪರಿಸರದ ಬಗ್ಗೆ, ಆಹಾರ ಪದ್ದತಿಯ ಬಗ್ಗೆ, ಅವಿಭಕ್ತ ಕುಟುಂಬದ ಮಹತ್ವದ ಬಗ್ಗೆ ವಿವರಿಸಿ, ಪರಿಸರ ಗೀತೆಯನ್ನು ಹಾಡಿದರು.
ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ತಾ.ಪಂ ಸದಸ್ಯೆ ಧನಲಕ್ಷ್ಮೀ ಜನಾರ್ದನ್, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್, ವನದುರ್ಗ ಗ್ರಾಮ ಅರಣ್ಯ ಸಮಿತಿ ಪುದುವೆಟ್ಟು ಇದರ ಅಧ್ಯಕ್ಷ ಮಧುಕರ ಹೆಬ್ಬಾರ್, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ರಾವ್ ಮಾತನಾಡಿ ಅರಣ್ಯ ಸಂರಕ್ಷಣೆಯ ಮಹತ್ವ ಮತ್ತು ವನಸಂಪತ್ತು ರಕ್ಷಣೆ ಬಗ್ಗೆ ಮಾತನಾಡಿದರು. ಬಾಲಕೃಷ್ಣ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ಷಿಕ ವರದಿ ಮತ್ತು ಜಮಾ-ಖರ್ಚು ಹಾಗೂ ಐದು ಸ್ವಸಹಾಯ ಸಂಘಗಳ ವರದಿಯನ್ನು ಕಾರ್ಯದರ್ಶಿ ಕುಮಾರ ಸ್ವಾಮಿ ಆರ್ ವಾಚಿಸಿದರು. ಅರಣ್ಯ ರಕ್ಷಕ ಆನಂದ ಮೋಹಿತೆ ಕಾರ್ಯಕ್ರಮ ನಿರೂಪಿಸಿ, ನೇತ್ರಾವತಿ ಅರಣ್ಯ ಸಮಿತಿ ಸದಸ್ಯ ನೀಲಕಂಠ ಶೆಟ್ಟಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.