ನಡ : ವಿಶ್ವ ಕೈ ತೊಳೆಯುವ ದಿನ ದ ಪ್ರಯುಕ್ತ ರೋಟರಿ ಕ್ಲಬ್ ಬೆಳ್ತಂಗಡಿ ಇವರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ ಇಲ್ಲಿ ವಾಷ್ ಇನ್ ಸ್ಕೂಲ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ನ ಅಧ್ಯಕ್ಷ ಡಿ.ಎಂ. ಗೌಡ, ಪ್ರಾಯೋಜಕರಾಗಿದ್ದ ಶ್ರೀಧರ್ ಕೆ.ವಿ, ಎಸ್.ಡಿ.ಎಂ ಸಿ ಅಧ್ಯಕ್ಷ ರೋಹಿತ್, ಆರೋಗ್ಯ ಕಾರ್ಯಕರ್ತೆ ಶ್ರೀಮತಿ ಗೋಪಿ, ಉಪಾಧ್ಯಕ್ಷೆ ಶ್ರೀಮತಿ ಸವಿತಾ ಜೈನ್ ಇವರುಗಳು ವೇದಿಕೆಯಲ್ಲಿ ಹಾಜರಿದ್ದರು. ಮುಖ್ಯ ಸಂಪನ್ಮೂಲ ವ್ಯಕ್ತಿ ಯಾಗಿ ಮಾತನಾಡಿದ ಡಾ.ಪ್ರದೀಪ್ ಅವರು ಸರಿಯಾಗಿ ಕೈ ತೊಳೆಯುವುದರಿಂದ ಮನುಷ್ಯನಿಗೆ ಬರುವ ಹಲವಾರು ರೋಗಗಳನ್ನು ತಡೆಯಬಹುದು. ಆರೋಗ್ಯವಂತರಾಗಿ ಬಾಳಬಹುದು ಅಲ್ಲದೆ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಕೈ ತೊಳೆಯುವ ಕ್ರಮವನ್ನು ತೋರಿಸಿಕೊಟ್ಟರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ವತಿಯಿಂದ ಶಾಲೆಗೆ ಐದು ಲೀಟರ್ನ ಲಿಕ್ಡ್ವಿಡ್ ಹ್ಯಾಂಡ್ ವಾಷ್ಅನ್ನು ನೀಡಲಾಯಿತು. ವಿದ್ಯಾರ್ಥಿಗಳಿಂದಲೂ ಕೈ ತೊಳೆಸುವ ಕಾರ್ಯ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕುಸುಮಾವತಿ ಇವರು ಸ್ವಾಗತಿಸಿ ವಂದಿಸಿದರು. ಶಿಕ್ಷಕರಾದ ವಿಕ್ಟರ್ ಮಾಡ್ತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಜಯಾ ಸ್ಟ್ರೆಲ್ಲಾ, ಕುಮಾರಿ ನಳಿನಿ ಇವರುಗಳು ಸಹಕರಿಸಿದರು.