ಧರ್ಮಸ್ಥಳ : ಯಾತ್ರಾರ್ಥಿಯಾಗಿ ಬಂದಿದ್ದ ಭರತ್ ನೀರುಪಾಲು ಈತನ ಸ್ನೇಹಿತ ಭರತ್ ಕುಮಾರ್ .ಬಿ ಪ್ರಾಣಾಪಾಯದಿಂದ ಪಾರು

ಧರ್ಮಸ್ಥಳ : ಹಾಸನ ಜಿಲ್ಲೆಯ ಆದಿ ಚುಂಚನಗಿರಿ ಬೆಳ್ಳೂರು ಕ್ರಾಸ್ ನಿವಾಸಿ ಹಾಗೂ ಈತನ ಸ್ನೇಹಿತ ಬೆಂಗಳೂರು ಗಾಂಧಿನಗರ ವೀರಭದ್ರ ದೇವಸ್ಥಾನದ ಬಳಿಯ ನಿವಾಸಿ ಇಬ್ಬರು ಧರ್ಮಸ್ಥಳ ದೇವಸ್ಥಾನಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದರು. ಇವರು ನೇತ್ರಾವತಿ ಸ್ನಾನಘಟ್ಟದಲ್ಲಿ ಅಪಾಯಕಾರಿ ಸ್ಥಳದಲ್ಲಿ ಸ್ನಾನಕ್ಕಿಳಿದು ಹಾಸನ ಮೂಲದ ನಿವಾಸಿ ಭರತ್(23ವ) ನದಿಯಲ್ಲಿ ಕೊಚ್ಚಿ ಹೋಗಿದ್ದು, ಮತ್ತೋರ್ವ ಬೆಂಗಳೂರು ಮೂಲದ ವ್ಯಕ್ತಿ ಭರತ್ ಕುಮಾರ್.ಬಿ (23ವ) ಕ್ಷೇತ್ರ ಸಿಬ್ಬಂದಿಗಳ ಹಾಗೂ ಸ್ಥಳೀಯರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.