HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಇಂಜಿನಿಯರ‍್ಸ್ ಡೇ: ಸಾಧನಾ ಶ್ರೀ ಪ್ರಶಸ್ತಿ ಪ್ರದಾನ

JCI prashasthi copyಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಜೇಸಿ ಸಪ್ತಾಹದಂಗವಾಗಿ ಇಂಜಿನಿಯರ‍್ಸ್ ಡೇ ಮತ್ತು ಸಾಧನಾ ಶ್ರೀ ಪ್ರದಾನ ಕಾರ್ಯಕ್ರಮ ಸೆ. 15 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ ಭಿಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿದ್ಯಾ ಎಜುಕೇಶನಲ್ ಇನ್ಸ್ಟ್‌ಟ್ಯೂಟ್ ಮಂಗಳೂರು ಇದರ ಆಡಳಿತಾಧಿಕಾರಿ ಲ| ಚಂದ್ರಹಾಸ ಶೆಟ್ಟಿ, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ, ಲಯನ್ಸ್ ಕ್ಲಬ್ ಅಧ್ಯಕ್ಷೆ ಸುಶೀಲಾ ಎಸ್ ಹೆಗ್ಡೆ, ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜೇಸಿಐಯ ಕಾರ್ಯಕ್ರಮಗಳನ್ನು ಸ್ಲಾಘಿಸಿದರು.
ಈ ಸಂದರ್ಭ ಯಕ್ಷಗಾನ ಕಲಾ ರಂಗದ ಹಿರಿಯ ಬಣ್ಣದ ವೇಷಧಾರಿ ಗಂಗಯ್ಯ ಶೆಟ್ಟಿ ಗೇರುಕಟ್ಟೆ ಅವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಜೇಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಸ್ವಾಗತಿಸಿ ಈ ವರ್ಷದ ಸಮೃದ್ಧ ಸಂಭ್ರಮದ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕ ಸಂತೋಷ್ ಪಿ. ಕೋಟ್ಯಾನ್, ಕಾರ್ಯದರ್ಶಿ ಪ್ರಶಾಂತ್ ಲಾಲ, ಜೆಜೇಸಿ ಅಧ್ಯಕ್ಷ ಸ್ಮಿತೇಶ್ ಎಸ್ ಬಾರ್ಯ ಉಪಸ್ಥಿತರಿದ್ದರು. ಪದಾಧಿಕಾರಿಗಳು ಸಹಕರಿಸಿದರು.
ದಿನದ ಸಾಂಸ್ಕೃತಿಕ ಉತ್ಸವದ ಭಾಗವಾಗಿ ಡ್ಯಾನ್ಸ್, ಡ್ಯಾನ್ಸ್ (ಫಿಲ್ಮಿ ಡ್ಯಾನ್ಸ್) ಸ್ಪರ್ಧೆ ನಡೆಯಿತು. ತೀರ್ಪುಗಾರರಾಗಿದ್ದ ಅಶ್ರಫ್ ಆಲಿಕುಂಞ, ಪೃಥ್ವಿಕಿರಣ್ ಎಂ. ಡಿ. ಮತ್ತು ಅಕ್ಷತಾ ಜೈನ್ ಅನಿಸಿಕೆ ವ್ಯಕ್ತಪಡಿಸಿದರು. ಕಿರಣ್ ಶೆಟ್ಟಿ ಮತ್ತು ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.