ಬೆಳ್ತಂಗಡಿ ಮಂಜುಶ್ರೀ ಜೇಸಿ ಸಪ್ತಾಹ ಸಂಪನ್ನ ಉತ್ತಮ ಜೀವನಕ್ಕೆ ಜೇಸಿ ಸಂಸ್ಥೆಯಿಂದ ಪ್ರೇರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Belthangady JC samapana copy ಪೂರ್ವಾಧ್ಯಕ್ಷರು ಹಾಗೂ ಜೇಸಿ ಪದಾಧಿಕಾರಿಗಳು ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಇವರನ್ನು ಅಭಿನಂದಿಸುತ್ತಿರುವುದು

ಬೆಳ್ತಂಗಡಿ : ಯುವ ಸಮುದಾಯದಲ್ಲಿ ಅತ್ಮವಿಶ್ವಾಸವನ್ನು ತುಂಬಿ, ವ್ಯಕ್ತಿತ್ವ ಹಾಗೂ ಮಾನವೀಯ ಗುಣಗಳನ್ನು ಬೆಳೆಸಿ, ಉತ್ತಮ ಜೀವನವನ್ನು ರೂಪಿಸುವ ಪ್ರೇರಣೆ ನೀಡುವ ಮಹತ್ವವಾದ ಕಾರ್ಯವನ್ನು ಮಾಡುವ ಸಂಸ್ಥೆಯೊಂದಿದ್ದರೆ ವಿಶ್ವದಲ್ಲಿ ಅದು ಜೇಸಿ ಸಂಸ್ಥೆ ಮಾತ್ರ ಎಂದು ಜೇಸಿ ವಲಯ 15ರ ಆಡಳಿತ ವಿಭಾಗದ ವಲಯ ನಿರ್ದೇಶಕ ಜೆಎಫ್‌ಪಿ ಸಂತೋಷ್ ಜಿ. ಹೇಳಿದರು.
ಮಂಜುಶ್ರೀ ಜೆ.ಸಿ.ಐ ಬೆಳ್ತಂಗಡಿ ಇದರ ಜೇಸಿ ಸಪ್ತಾಹದ ಕೊನೆಯ ದಿನವಾದ ಸೆ.20ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಬೆಳ್ತಂಗಡಿ ಮಂಜುಶ್ರೀ ಜೇಸಿಗೆ ಜೇಸಿ ವಲಯದಲ್ಲಿ ಉತ್ತಮ ಹೆಸರಿದೆ. ಇಲ್ಲಿಯ ಯುವಕರ ತಂಡ ಉತ್ತಮ ಕಾಂiiಕ್ರಮಗಳ ಮೂಲಕ ಜೇಸಿಯ ಹಿರಿಮೆ ಏನು? ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜೇಸಿಯಲ್ಲಿ ತೊಡಗಿಸಿಕೊಂಡಷ್ಟು ನಮ್ಮ ವ್ಯಕ್ತಿತ್ವ, ಜೀವನ ಬೆಳೆಯುತ್ತದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ವಹಿಸಿ, ಜೇಸಿ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಾಗ ವ್ಯಕ್ತಿತ್ವ ನಿರ್ಮಾಣವಾಗಿ, ಸಾಮಾಜಿಕ ಬದುಕಿನ ಪಾಠದ ಜೊತೆಗೆ ವ್ಯಕ್ತಿತ್ವ ನಿರ್ಮಾಣಕ್ಕೆ ನನಗೆ ಸಹಕಾರ ಆಯಿತು. ಪ್ರತಿಯೊಬ್ಬ ಯುವಕರು ಜೇಸಿ ಸಂಸ್ಥೆಗೆ ಸೇರಬೇಕು ಎಂದು ಜೇಸಿ ಸಪ್ತಾಹಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಜೆಪಿ ತಾಲೂಕು ಅಧ್ಯಕ್ಷ ರಂಜನ್ ಜಿ. ಗೌಡ ಮಾತನಾಡಿ ಜೇಸಿ ಮಕ್ಕಳಲ್ಲಿರುವ ಪ್ರತಿಭೆಗೆ ವೇದಿಕೆ ಒದಗಿಸುವುದರ ಜೊತೆಗೆ ಯುವಕರಿಗೆ ಶಿಸ್ತು ಬದ್ಧ ಜೀವನಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದರು. ಲಯನ್ಸ್ ಉಪರಾಜ್ಯಪಾಲ ಲ|ದೇವದಾಸ ಭಂಡಾರಿ ಮಾತನಾಡಿ ಜೇಸಿ ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದರ ಜೊತೆಗೆ ಜೀವನಕ್ಕೆ ಮೌಲ್ಯವನ್ನು ನೀಡುವ ಸಂಸ್ಥೆಯಾಗಿದೆ ಎಂದರು. ಕಣಿಯೂರು ರೈತ ಬಂಧು ಆಹಾರೋದ್ಯಮದ ಶಿವಶಂಕರ ನಾಯಕ್ ಮಾತನಾಡಿ ಸಮಾಜ ಸೇವೆಯಲ್ಲಿ ಆನೇಕ ಉತ್ತಮ ಕಾರ್ಯಗಳು ನಡೆದರೂ, ನಮ್ಮಿಂದ ಒಂದು ತಪ್ಪದಾಗ ಅದನ್ನೇ ವೈಭೀಕರಿಸುವ ಜನರು ಇರುತ್ತಾರೆ. ನಮ್ಮನ್ನು ಹೊಗಳುವ ಸ್ನೇಹಿತ ಅಪಾಯಕಾರಿ, ತಪ್ಪುಗಳನ್ನು ಹೇಳುವವನೇ ನಿಜವಾದ ಸ್ನೇಹಿತ ಎಂದರು. ನಿಕಟಪೂರ್ವ ಅಧ್ಯಕ್ಷ ಜೆಎಫ್‌ಎಂ ಚಿದಾನಂದ ಇಡ್ಯ ಮಾತನಾಡಿ ಇತ್ತಿಚೇಗೆ ನಡೆದ ಘಟನೆಯನ್ನು ಕೆಲವರು ವೈಭವೀಕರಿಸಿದ್ದಾರೆ. ಮಾನವೀಯತೆ ಇಲ್ಲ ಎಂದು ಹೇಳಿದ್ದಾರೆ ಆದರೆ ನಾನು ಜೇಸಿ ಸಂಸ್ಥೆಯಿಂದ ಮಾನವೀಯತೆಯನ್ನು ಕಲಿತಿದ್ದೇನೆ. ಇತರರು ಕಲಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಅಶ್ವಲ್ ರೈ ಇವರಿಗೆ ಅತ್ಯುತ್ತಮ ಯುವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಅವರನ್ನು ಜೇಸಿ ಮಾಜಿ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು. ಸನ್ಮಾನಿತರನ್ನು ಜೇಸಿ ಕೇಶವ ಪೈ ಪರಿಚಯಿಸಿದರು. ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಶಾಂತ್ ರೈ ಬೆಂಗಳೂರು ಇವರನ್ನು ಅಭಿನಂದಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕ ಜೇಸಿ ಹೆಚ್.ಜಿ.ಎಫ್ ಸಂತೋಷ್ ಪಿ. ಕೋಟ್ಯಾನ್, ಜೂ.ಜೇಸಿ ಅಧ್ಯಕ್ಷ ಸ್ಮೀತೇಶ್ ಬಾರ್ಯ, ಕೋಶಾಧಿಕಾರಿ ಸ್ವರೂಪ್, ಜೇಸಿರೇಟ್ ನಿರ್ದೇಶಕಿ ಸ್ವಾತಿ, ಜೇಸಿರೇಟ್ ಅಧ್ಯಕ್ಷೆ ಶಾಲಿನಿ ವಸಂತ್, ಕಾರ್ಯಕ್ರಮ ಸಹ ಸಂಯೋಜಕರಾದ ಕಿರಣ್‌ಕುಮಾರ್ ಶೆಟ್ಟಿ, ಗಣೇಶ್ ಬಿ.ಶಿರ್ಲಾಲು, ಅಭಿನಂದನ್, ವಿನ್ಸೆಂಟ್ ಲೋಬೊ ಉಪಸ್ಥಿತರಿದ್ದರು.
ಜೇಸಿ ದಯಾನಂದ ನಾಯಕ್ ಅತಿಥಿ-ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ ಪ್ರಶಾಂತ ಲಾಲ ವರದಿ ವಾಚಿಸಿ, ವಂದಿಸಿದರು. ಬಳಿಕ ನಮ್ಮ ಟಿ.ವಿ ಬಲೆ ತೆಲಿಪಾಲೆ ಖ್ಯಾತಿಯ ಹಾಸ್ಯ ಕಲಾವಿದರಿಂದ ತೆಲಿಕೆದ ಪರ್ಬ ಮನೋರಂಜನಾ ಕಾರ್ಯಕ್ರಮ ನಡೆಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.