HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪ್ರಸನ್ನ ಆಯುರ್ವೇದ ಕಾಲೇಜು: ಪ್ರಾಂಶುಪಾಲರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

Dr B V Prasanna ¥ÀgÀ¸À¸Àw copyಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಲಾಲ, ಬೆಳ್ತಂಗಡಿ ಇದರ ಪ್ರಾಂಶುಪಾಲರಾದ ಡಾ|| ಬಿ. ವಿ. ಪ್ರಸನ್ನ ಇವರಿಗೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇವರು ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಆಯುರ್ವೇದ ಶಿಕ್ಷಣದಲ್ಲಿ ಗೈದಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ದಕ್ಷ ಆದರ್ಶ ಶಿಕ್ಷಕ-2016 ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ.
ಇದರ ಪ್ರಯುಕ್ತ ಪ್ರಸನ್ನ ಕಾಲೇಜಿನಲ್ಲಿ ಪ್ರಶಸ್ತಿ ಪಡೆದ ಪ್ರಾಂಶುಪಾಲರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಗೊಳ್ಳಲಾಗಿತ್ತು. ಸಭೆಯಅಧ್ಯಕ್ಷತೆಯನ್ನು ಪ್ರಸನ್ನ ಎಜುಕೇಶನ್‌ಟ್ರಸ್ಟ್ ಅಧ್ಯಕ್ಷ ಕೆ. ಗಂಗಾಧರಗೌಡ ವಹಿಸಿದ್ದರು. ಅವರು ಪ್ರಾಂಶುಪಾಲರನ್ನು ಗೌರವಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಆಡಳಿತಾಧಿಕಾರಿ ಹರೀಶ್ ಶೆಟ್ಟಿ ಮತ್ತು ಕಿರಣ್ ಹೆಬ್ಬಾರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಯುರ್ವೇದ ರಿಜಿಸ್ಟ್ರಾರ್ ಡಾ. ಶ್ರೀಕುಮಾರ್ ಸ್ವಾಗತಿಸಿ, ನಿರ್ವಹಿಸಿದರು, ಸಂಸ್ಕೃತ ಅಧ್ಯಾಪಕ ಈಶ್ವರಚಂದ್ರ ಧನ್ಯವಾದವಿತ್ತರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.