ಶಾಲಾ-ಕಾಲೇಜುಗಳಿಗೆ ದಸರಾ ರಜೆಯಲ್ಲಿ ಕಡಿತ

ಅ.7 ಸಮುದಾಯದತ್ತ ಶಾಲೆ   ಅ.9 ರಿಂದ 30ರ ವರೆಗೆ ರಜೆ

ಬೆಳ್ತಂಗಡಿ : ಬೇರೆ, ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಬಂದ್ ನಡೆದ ಹಿನ್ನಲೆಯಲ್ಲಿ ಈ ಬಾರಿ ಸರಕಾರಿ ಪ್ರಾಥಮಿಕ ಶಾಲೆಗಳ ದಸರಾ ರಜೆಯನ್ನು 5 ದಿನ ಮತ್ತು ಪದವಿ ಪೂರ್ವ ಕಾಲೇಜುಗಳ ದಸರಾ ರಜೆಯನ್ನು 4 ದಿನ ಕಡಿತಗೊಳಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ.
ಹಿಂದಿನ ವರ್ಷಗಳಲ್ಲಿ ಅ.3ರಿಂದ 30ರವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ನೀಡಲಾಗುತ್ತಿತ್ತು. ಈ ಬಾರಿ ಅ.9ರಿಂದ 30ರವರೆಗೆ ರಜೆ ನೀಡುವ ಬಗ್ಗೆ ತೀರ್ಮಾನವಾಗಿದೆ ಎಂದು ಹೇಳಲಾಗುತ್ತಿದೆ. ಅ.3ರಿಂದ 7ರವರೆಗೆ ತರಗತಿಗಳು ನಡೆಯಲಿದ್ದು, 5 ದಿನಗಳ ರಜೆ ಕಡಿತಗೊಳಿಸಲಾಗುತ್ತಿದೆ. ಅ.೭ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಸುವಂತೆ ಈಗಾಗಲೇ ಶಿಕ್ಷಣ ಇಲಾಖೆಗೆ ಆದೇಶ ಬಂದಿದೆ. ಅ.8 ರವಿವಾರವಾಗಿದೆ. ಅ.9ರಿಂದ 30ರವರೆಗೆ 22 ದಿನ ರಜೆ ನೀಡಲಾಗಿದೆ. ಆದರೆ ಈ ಬಗ್ಗೆ ಶಿಕ್ಷಣ ಇಲಾಖೆಗೆ ಯಾವುದೇ ಆದೇಶ ಬಂದಿಲ್ಲ. ಪ.ಪೂ ಕಾಲೇಜುಗಳಿಗೆ ಅ.9ರಿಂದ 28ರ ಬದಲು, ಅ.9ರಿಂದ 24ರವರೆಗೆ ರಜೆ ನೀಡುವ ಸಾಧ್ಯತೆಯಿದೆ.
ಕಾವೇರಿ ಮತ್ತು ಮಹಾದಾಯಿ ವಿವಾದದಲ್ಲಿ ರಾಜ್ಯ ಬಂದ್, ಕಾರ್ಮಿಕ ಸಂಘಟನೆಗಳ ಬಂದ್ ಕರೆ ಸಹಿತ ವಿವಿಧ ಕಾರಣಗಳಿಂದ ಶಾಲಾ-ಕಾಲೇಜುಗಳಿಗೆ ಸುಮಾರು ೯ ದಿನಗಳಿಗೂ ಹೆಚ್ಚು ಆಕಾಲಿಕ ರಜೆ ನೀಡಲಾಗಿತ್ತು. ಇದರನ್ವಯ ಈ ರಜಾ ತರಗತಿಗಳನ್ನು ಸರಿದೂಗಿಸಲು ಸರಕಾರ ರಜಾ ದಿನಗಳನ್ನು ಕಡಿತ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಆದರೆ ಇದಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಬಂದ್ ಹಿನ್ನಲೆಯಲ್ಲಿ ದೊರೆತ ರಜೆ ಅವಧಿಯ ತರಗತಿಗಳನ್ನು ಶನಿವಾರ, ರವಿವಾರ ತರಗತಿಗಳನ್ನು ನಡೆಸಿ ಸರಿದೂಗಿಸಲಾಗಿದೆ ಎಂದು ಹೇಳಿವೆ. ರಜೆಯ ಬಗ್ಗೆ ಸರಕಾರದ ಆದೇಶ ಬಂದ ಬಳಿಕವೇ ಸ್ವಷ್ಟ ಮಾಹಿತಿ ದೊರೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.