ಉಜಿರೆಯ ಮಾರಿಗುಡಿ ಬಳಿ ಶ್ರೀ ಸ್ಕಂದಪ್ರಸಾದ್ ಇಲೆಕ್ಟ್ರಿಕಲ್ಸ್ ಶುಭಾರಂಭ

p

pp

r

 

rr

ಉಜಿರೆ: ಉಜಿರೆಯ ಮಾರಿಗುಡಿ ಬಳಿ ಶ್ರೀ ಮಹಾಮ್ಮಾಯಿ ವಾಣಿಜ್ಯ ಮಳಿಗೆಯ ಮೊದಲ ಮಹಡಿಯಲ್ಲಿ ಶ್ರೀ ಸ್ಕಂದಪ್ರಸಾದ್ ಇಲೆಕ್ಟ್ರಿಕಲ್ಸ್ ಸೇಲ್ಸ್ ಮತ್ತು ಸರ್ವಿಸಸ್ ಸಂಸ್ಥೆಯ ಉದ್ಘಾಟನೆಯು ಸೆ. 16 ರಂದು ನೆರವೇರಿತು. ಉಜಿರೆಶ್ರೀ ಜನಾರ್ದನ ದೇವಾಲಯದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ದೀಪಬೆಳಗಿಸಿ, ಶ್ರೀ ಜನಾರ್ದನ ದೇವರ ಶ್ರೀಗಂಧ ಪ್ರಸಾದ ನೀಡುವ ಮೂಲಕ ನೂತನ ಸಂಸ್ಥೆಗೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಧರ್ಮದರ್ಶಿಗಳ ಪುತ್ರ ಶರತ್‌ಕೃಷ್ಣ ಪಡುವೆಟ್ನಾಯ, ಭಾರತೀಯ ಜನತಾ ಪಾರ್ಟಿ ತಾ| ಅಧ್ಯಕ್ಷ ರಂಜನ್ ಜಿ ಗೌಡ, ಎಸ್.ಎಲ್. ವಿ ಕಸ್ಟ್ರಕ್ಷನ್ಸ್ ಇದರ ಇಂಜಿನಿಯರ್, ಅರ್ಕಿಟೆಕ್ಟ್ ಹಾಗೂ ಕಾಂಟ್ರಾಕ್ಟರ್ ಸಂಪತ್‌ರತ್ನರಾವ್, ಮಂಗಳೂರು ಸಿ.ಆರ್. ಝೆಡ್ ಎ.ಸಿ.ಎಫ್ ಎನ್ ಸುಬ್ರಹ್ಮಣ್ಯ ರಾವ್, ಉಜಿರೆ ಕಾರ್ಪೋರೇಶನ್ ಬ್ಯಾಂಕ್ ಮೆನೇಜರ್ ಶ್ರೀಮತಿ ನಾಗಲಕ್ಷ್ಮೀ ಸಿ, ಉಜಿರೆ ಗ್ರಾ.ಪಂ ಅಧ್ಯಕ್ಷ ಕೆ ಶ್ರೀಧರ ಪೂಜಾರಿ, ಸಿವಿಲ್ ಗುತ್ತಿಗೆದಾರ ಅನಿಲ್ ಡಿಸೋಜಾ, ಸರಕಾರದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸೀತಾರಾಮ ಬಂಗೇರ ಮುಖ್ಯ ಅತಿಥಿಯಾಗಿದ್ದರು.
ಪಕ್ರಾಶ್ ಎಲೆಕ್ಟ್ರಾನಿಕ್ಸ್ ಮಾಲಕ ಪುಷ್ಪರಾಜ್ ಶೆಟ್ಟಿ, ವಿದ್ಯುತ್ ಗುತ್ತಿಗೆದಾರ ರಾಧಾಕೃಷ್ಣ ಶೆಟ್ಟಿ, ರತ್ನಾಕರ ಶೆಟ್ಟಿ ಬಡೆಕೊಟ್ಟು, ಜಯಪ್ರಕಾಶ್ ಶೆಟ್ಟಿ ಬಡೆಕೊಟ್ಟು, ಗಂಗಾಧರ ಪೂಜಾರಿ ಪರಾರಿ, ದಾಸಪ್ಪ ಗೌಡ ಉಜಿರೆ, ಸಚಿನ್ ಅಟೋಮೊಬೈಲ್ಸ್‌ನ ಸುರೇಶ್ ಪೆರ್ಲ, ಬಾಲಕೃಷ್ಣ ಗೌಡ ಪಂಜುರ್ಲಿಮಾರು, ಮಧುರಾ ಪ್ರಿಂಟರ‍್ಸ್‌ನ ಪ್ರಸಾದ್, ಗಿರೀಶ್ ಪೆರ್ಲ, ಪ್ರವೀಣ್ ಕುಮಾರ್ ಅಂತರ, ಮನೋಹರ ಅಂತರ, ಮೂಡಬಿದ್ರೆಯ ಜಯಶ್ರೀ ಕೇಶವ ನೀರಜಾಲು, ಗುರುಚಿಕನ್ ಸೆಂಟರ್‌ನ ಗುರುರಾಜ್ ಮೊದಲಾದವರಲ್ಲದೆ ಗ್ರಾಹಕರು ಆಗಮಿಸಿ ಶುಭ ಕೋರಿದರು. ಗೋಪಾಲಕೃಷ್ಣ ಜಿ.ಕೆ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.