HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕಾಂತಾಜೆ ಈಶ್ವರ ಭಟ್‌ರಿಗೆ ಚಾತುರ್ಮಾಸ್ಯ ಪ್ರಶಸ್ತಿ ಪ್ರಧಾನ

kanthaje 2

kanthaje 3

kanthaje eshwar bhat 1

kanthaje

ಬೆಳ್ತಂಗಡಿ : ಶ್ರೀರಾಮ ಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಚಾತುರ್ಮಾಸ್ಯ ಸಂದರ್ಭದಲ್ಲಿ ಸಮಾಜದ ಏಳಿಗೆಗಾಗಿ ದುಡಿದ ತನ್ನ ಶಿಷ್ಯ -ಅಭಿಮಾನಿಗಳನ್ನು ಗುರುತಿಸಿ ಗೌರವಿಸಿ ಆಶೀರ್ವದಿಸಿ, ಚಾತುರ್ಮಾಸ್ಯ ಪ್ರಶಸ್ತಿಯನ್ನು ಪ್ರಧಾನ ಮಾಡುವ ಒಂದು ಅಪೂರ್ವ ಕಾರ್ಯವನ್ನು ಆರಂಭಿಸಿದ್ದರು.
ಈ ವರ್ಷ ಈ ಪ್ರಶಸ್ತಿಗೆ ಭಾಜನರಾದವರು ಕೊಯ್ಯೂರು ಗ್ರಾಮದ ಕಾಂತಾಜೆ ಈಶ್ವರ ಭಟ್ಟರು ಸೆ.16ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಓರ್ವ ಯಶಸ್ವಿ ಕೃಷಿಕನಾಗಿ, ಉದ್ಯಮಿಯಾಗಿ, ವ್ಯವಹಾರಸ್ಥರಾಗಿ, ಸಮಾಜ ಸೇವಕರಾಗಿ, ಧಾರ್ಮಿಕ ಮುಂದಾಳುವಾಗಿ, ಗೋಶಾಲಾ ವ್ಯವಸ್ಥಾಪಕರಾಗಿ, ತಾಲೂಕು ವಿಶ್ವ ಹಿಂದೂ ಪರಿಷತ್ ಕೋಶಾಧಿಕಾರಿಯಾಗಿ, ರಾಜಕೀಯವಾಗಿ, ಜನಸಂಘ ತಾಲೂಕು ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಸಮಿತಿ ಸದಸ್ಯರಾಗಿ, ಅಲ್;ದೆ ಹೈನುಗಾರಿಕೆ ಉದ್ಯಮಿಯಾಗಿ, ಸೇವೆ ಸಲ್ಲಸಿದ ಇವರು, ಶ್ರೀ ಮಠದ ಶ್ರೀ ಗುರುಗಳ ನಿಷ್ಠಾವಂತ ಭಕ್ತನಾಗಿ ಹೀಗೆ ತನ್ನನ್ನು ತೊಡಗಿಸಿಕೊಂಡವರು.
ಪ್ರಸ್ತುತ ಗುರುವಾಯನಕೆರೆ ನಮ್ಮ ಮನೆ, ಗುಂಡೂರಿಯ ಕಾವೇರಮ್ಮ ಅಮೃತಧಾರೆ ಗೋಶಾಲೆ, ಮಲೆಬೆಟ್ಟು ಶ್ರೀ ವನದುರ್ಗಾ ದೇಗುಲ, ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನ ಇವೆಲ್ಲದರ ನಾಯಕತ್ವ ವಹಿಸಿ ಯಶಸ್ವಿಯಾಗಿ ಸಕಾರಗೊಳಿಸಿದವರು.
ಓರ್ವ ಸಂಘಟನಾ ಚಾತುರ್ಯವಾಗಿ ಹವ್ಯಕ ಸಮಾಜಕ್ಕೆ ಬೆಳ್ತಂಗಡಿ ತಾಲೂಕಿನ ಲ್ಲೊಂದು ನೆಲೆ ಒದಗಿಸಿಕೊಟ್ಟು, ಶ್ರೀ ಗುರುಗಳ ಎಲ್ಲಾ ಸಮಾಜಸೇವೆ, ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತನುಮನದೊಂದಿಗೆ ತನ್ನ ಮಕ್ಕಳು, ಮೊಮ್ಮಕ್ಕಳನ್ನು ಸೇರಿಸಿಕೊಂಡು ಸಮಾಜದಲ್ಲಿ ಮಾದರಿಯಾಗಿ ತಲೆಯೆತ್ತಿ ನಿಲ್ಲುವಂತೆ ಮಾಡಿರುವುದರಲ್ಲಿ ಇವರ ಕೊಡುಗೆ ಗಮನಾರ್ಹವಾಗಿದೆ.
78ರ ಹರೆಯದ ಕಾಂತಾಜೆ ಈಶ್ವರ ಭಟ್ಟರಿಗೆ ಈ ವರ್ಷದ ಅನುಗ್ರಹಧಾರೆ ಪ್ರಶಸ್ತಿ ರೂಪದಲ್ಲಿ ಹರಿದು ಬಂದಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.