ಮೂರು ಅವಧಿಯಲ್ಲಿ ಸಂತ ಅಂತೋನಿ ಚರ್ಚಿನ ನಿತ್ಯಾಧರ್ ವಾಳೆಯ ಗುರಿಕಾರರಾಗಿದ್ದ ಚಾರ್ಲ್ಸ್ ಪಿಂಟೊ ಹೃದಾಯಾಘಾತದಿಂದ ನಿಧನ

charlie  pinto copy ಉಜಿರೆ ಗ್ರಾಮದ ಹಲಕ್ಕೆ ಇಮ್ಯಾನ್ಯುವೆಲ್ ಮನೆಯ ಚಾರ್ಲ್ಸ್ ಪಿಂಟೊ(74ವ) ಸೆ.17ರಂದು ಹೃದಾಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಮೂರು ಅವಧಿಯಲ್ಲಿ ಸಂತ ಅಂತೋನಿ ಚರ್ಚಿನ ನಿತ್ಯಾಧರ್ ವಾಳೆಯ ಗುರಿಕಾರರಾಗಿ ಸೇವೆ ಸಲ್ಲಿಸಿ ಹಾಗೂ ಉಜಿರೆ ಕಾಥೋಲಿಕ್ ಸಭೆಯ ಸದಸ್ಯರಾಗಿದ್ದರು.
ಪುತ್ರ ದಿ|ಸಿರಿಲ್ ಪಿಂಟೊ ಕಳೆದ ನಾಲ್ಕು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಇವರ ಪತ್ನಿ ಶ್ರೀಮತಿ ಫಿಲೋಮಿನಾ ಪಿಂಟೊ, ಪುತ್ರರಾದ ಸಿಪ್ರಿಯನ್ ಪಿಂಟೊ, ಉತ್ತರ ಪ್ರದೇಶದಲ್ಲಿ ಅಸ್ಸಾಂನಲ್ಲಿ ಸೇವೆ ಸಲ್ಲಿಸುತ್ತಿರುವ ವಂ|ಫಾ| ವಿಲಿಯಂ ಪ್ರಕಾಶ್ ಪಿಂಟೊ, ಸುದ್ದಿ ಬಿಡುಗಡೆಯ ಹೆರಾಲ್ಡ್ ಪಿಂಟೊ, ಪುತ್ರಿ ತೆರೆಸಾ ಪಿಂಟೊ ಸೇರಿದಂತೆ ಮೊಮ್ಮಕ್ಕಳು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.
ಮೃತರ ಕುಟುಂಬಕ್ಕೆ ಬೆಳ್ತಂಗಡಿಯ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕುಯಿ ಸಂತಾಪ ಸೂಚಿಸಿದರು.
ಮೃತರ ಅಂತಿಮ ಕ್ರಿಯೆಯು ಸೆ.18ರಂದು ಉಜಿರೆ ಸಂತ ಅಂತೋನಿ ಚರ್ಚಿನಲ್ಲಿ ಜರಗಿತು. ಈ ಸಂದರ್ಭದಲ್ಲಿ ವಂ|ಫಾ| ಜೋಸೆಫ್ ಮಸ್ಕರೇನಸ್, ವಂ|ಫಾ| ಉದಯ ಜೋಸೆಫ್, ವಂ|ಫಾ| ನವೀನ್ ಡಿಸೋಜ, ವಂ|ಫಾ| ವಿನೋದ್ ಮಸ್ಕರೇನಸ್, ಇನ್ನಿತರ ಧರ್ಮಗುರುಗಳು, ಧರ್ಮಭಗಿನಿಯರು, ಅಪಾರ ಬಂಧುವರ್ಗದವರು ಸೇರಿದ್ದರು. ನಿಶಾಲ್ ಪಿಂಟೊ ಸರ್ವರ ಪರವಾಗಿ ಶ್ರದ್ಧಾಂಜಲಿ ಅರ್ಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.