ನಾವು ಬೆಳೆಯುವುದರೊಂದಿಗೆ ಇತರರನ್ನು ಬೆಳೆಸಬೇಕು : ಜಯಂತ್ ಶೆಟ್ಟಿ

mada

madanthyar jc sapthaha 2 copy

ಮಡಂತ್ಯಾ ರ್ ಜೇಸಿ ಸಪ್ತಾಹ ಸಮಾರೋಪ

 ಮಡಂತ್ಯಾರ್ :  ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿರುವ ಜೇಸಿ ಸಂಸ್ಥೆಯ ಜೇಸಿ ವಾಣಿಯಂತೆ, ಯುವ ಜನರಲ್ಲಿರುವ ಶ್ರೇಷ್ಠ ಸಂಪತ್ತನ್ನು ಇತರರಿಗೆ ನೀಡಿದರೆ ಜೀವನ ಸಾರ್ಥಕವಾಗುತ್ತದೆ. ಮಾನವಕುಲದ ಸೇವೆ ಜೀವನದ ಅತ್ಯುತ್ತಮ ಸೇವೆ ಎಂದು ಮಡಂತ್ಯಾರಿನಲ್ಲಿ ಸೆ.೧೫ರಂದು ನಡೆದ ಜೇಸಿ ಸಪ್ತಾಹ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಉತ್ತಮ ಸಾಧನೆ, ಉತ್ತಮ ಕೆಲಸ, ನಾವು ಬೆಳೆಯುವುದರೊಂದಿಗೆ ಇತರರನ್ನು ಬೆಳೆಸಲು ಅವಕಾಶ ಮಾಡಿಕೊಡಬೇಕೆಂದರು.
ವೇದಿಕೆಯಲ್ಲಿ ಜೇಸಿ ಅಧ್ಯಕ್ಷ ಜೇಸಿ ಜಯೇಶ್ ಬರೆಟ್ಟೊ ಅಧ್ಯಕ್ಷತೆ ವಹಿಸಿದ್ದರು. ಕುವೆಟ್ಟು ಕ್ಷೇತ್ರದ ಜಿ.ಪಂ ಸದಸ್ಯೆ ಶ್ರೀಮತಿ ಮಮತಾ ಶೆಟ್ಟಿ, ಪೂರ್ವ ವಲಯಾಧ್ಯಕ್ಷ ಜೇಸಿ ಹರೀಶ್ಚಂದ್ರ ಅಮೀನ್, ಯುವ ಜೇಸಿ ನಿರ್ದೇಶಕ ಜೇಸಿ ರಾಧಕೃಷ್ಣ ಬಂಟ್ವಾಳ, ಆಡಳಿತ ವಿಭಾಗದ ನಿರ್ದೇಶಕ ಸಂತೋಷ್, ಜೆಸಿರೆಟ್ ಅಧ್ಯಕ್ಷೆ ಡಿಗ್ನಾ ಮೋರಾಸ್, ಕಾರ್ಯದರ್ಶಿ ರಾಜೇಶ್.ಪಿ, ಸಪ್ತಾಹ ಸಂಯೋಜಕ ಜೇಸಿ ಎಸ್.ಆರ್.ನಾಯಕ್, ನಿಕಟಪೂರ್ವಾಧ್ಯಕ್ಷ ಜೇಸಿ ಐವನ್ ಸಿಕ್ವೇರಾ, ಸನ್ಮಾನಿತ ಪರಿಚಯವನ್ನು ಪ್ರಸನ್ನ ಶೆಟ್ಟಿ ನೆರವೇರಿಸಿದರು. ಜೇಸಿ ವಾಣಿಯನ್ನು ವಿಕ್ಯಾತ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಡಂತ್ಯಾರ್ ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ, ನಿವೃತ್ತ ಶಿಕ್ಷಕ ರಮೇಶ್, ಜೇಸಿ ಚೈತ್ರಾ ಜೈನ್, ಪೂರ್ವಾಧ್ಯಕ್ಷ ಜೇಸಿ ಶ್ರೀಧರ ಆಚಾರ್ಯ, ಜೇಸಿ ವಿನ್ಸೆಂಟ್ ಮೋರಾಸ್, ಎಲ್ಲಾ ಪೂರ್ವಾಧ್ಯಕ್ಷರು, ಸದಸ್ಯರು, ಜೇಸಿರೆಟ್ ಸದಸ್ಯರು ಉಪಸ್ಥಿತರಿದ್ದರು. 

ದಕ್ಷಿಣ ಭಾರತದಲ್ಲಿ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಮಂಗಳೂರು ಪೋಲೀಸ್ ಇಲಾಖೆಯಲ್ಲಿ ಕ್ರೈಂ ಬ್ಯೂರೋದಲ್ಲಿ ಸೇವೆ ಸಲ್ಲಿಸುತ್ತಿರುವ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಠ ಸಾಧನೆ ಮಡಿದ ಡ್ಯಾನಿ ತಾವ್ರೆ ಇವರನ್ನು ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರತಿ ದಿನ ನಡೆದ ಸ್ಫದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.