ತೆಂಕಕಾರಂದೂರು : ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ ಸಮಿತಿ ರಚನೆ ಸಭೆ

Advt_NewsUnder_1
Advt_NewsUnder_1

vishnumoorthi templ shabe copyತೆಂಕಕಾರಂದೂರು : ಶ್ರೀ ವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವವು ಮುಂದಿನ ವರ್ಷ ಜನವರಿ 28 ರಿಂದ ಫೆಬ್ರವರಿ 4ರ ತನಕ ನಡೆಯಲಿದ್ದು ಇದರ ಬ್ರಹ್ಮಕಲಶೋತ್ಸವ ಸಮಿತಿ ರಚನೆ ಸಭೆಯು ಸೆ 4 ರಂದು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್‌ರವರು ವಹಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಕೃಷ್ಣಸಂಪಿಗೆತ್ತಾಯ, ಪಡಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್ ನಡಕ್ಕರ, ಅನಿಲ್ ಕುಮಾರ್ ಮಾಳಿಗೆಮನೆ, ಸಂತೋಷ್ ಹೆಗ್ಡೆ ಮಾರುತಿನಿಲಯ, ಜಗದೀಶ್ ಗೌಡ ಕಜೆಬೆಟ್ಟು, ನಾರಾಯಣ ರೈ, ವಿಠಲ ಹೆಗ್ಡೆ, ಕೆ.ವಾಸು ಪೂಜಾರಿ ಕುದ್ಕೋಳಿ, ಬಳೆಂಜ ಗ್ರಾ.ಪಂ ಅಧ್ಯಕ್ಷೆ ದೇವಕಿ, ಪಡಂಗಡಿ ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಿ, ಶ್ರೀಕ್ಷೇತ್ರ ಗ್ರಾ. ಯೋ. ಅಳದಂಗಡಿ ವಲಯದ ಮೇಲ್ವಿಚಾರಕ ಶಿವರಾಮ್, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ಆಡಳಿತ ಮೊಕ್ತೇಸರರು ಪ್ರಾಸ್ತಾವಿಕ ಮಾತನಾಡಿದರು, ಅನಂತರಾಮ ಸಂಪಿಗೆತ್ತಾಯರವರು ದೇವರ ಪ್ರಾರ್ಥನೆಯೊಂದಿಗೆ ದೇವದಾಸ್ ನಾಯಕ್‌ರವರು ಕಾರ್ಯಕ್ರಮ ನಿರೂಪಣೆಯೊಂದಿಗೆ, ಸಂತೋಷ್ ಹೆಗ್ಡೆಯವರು ಸ್ವಾಗತಿಸಿದರು. ನಾರಾಯಣ ಮೂಲ್ಯ ಕಳಿಕರವರು ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.