ಮುಂಡಾಜೆ : ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಆ. 28 ರಂದು ಮುಂಡಾಜೆಯಲ್ಲಿ ನಡೆದ ಮೊಸರು ಕುಡಿಕೆ ಉತ್ಸವ ಸಮಾರಂಭದಲ್ಲಿ ವಯೋನಿವೃತ್ತಿ ಹೊಂದಿದ ಪಿಡಿಒ ರತ್ನರಾಜ ಹೆಗ್ಡೆ ಬಾವಂತಬೆಟ್ಟು ಗುತ್ತು ಅವರನ್ನು ಸನ್ಮಾನಿಸಲಾಯಿತು. ಗ್ರಾ.ಪಂ. ಸದಸ್ಯರಾದ ನಾರಾಯಣ ಗೌಡ ದೇವಸ್ಯ, ಚೆನ್ನಕೇಶವ ನಾಯ್ಕ, ಸುರೇಶ್ ಹೆಗ್ಡೆ ಮತ್ತು ಗಣೇಶ್ ಬಂಗೇರ, ಯಂಗ್ಚಾಲೆಂಜರ್ಸ್ ಅಧ್ಯಕ್ಷ ನಾಗರಾಜ್ ನಾಯ್ಕ, ಕಾರ್ಯದರ್ಶಿ ಶೀನಪ್ಪ ಗೌಡ, ಹಿರಿಯ ಉಪಾಧ್ಯಕ್ಷ ಅಶ್ರಫ್ ಆಲಿಕುಂಞಿ, ಸ್ಥಾಪಕಾಧ್ಯಕ್ಷ ನಾಮದೇವ ರಾವ್ ಮೊದಲಾದವರು ಉಪಸ್ಥಿತರಿದ್ದರು.