ಬೆಳ್ತಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಹಾಸಭೆ ರೂ.28.76ಲಕ್ಷ ಲಾಭ – ಶೇ.15 ಡಿವಿಡೆಂಟ್ ಘೋಷಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Belthangady CA bank mahasabhe copy ಬೆಳ್ತಂಗಡಿ : ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ವಾರ್ಷಿಕ ಮಹಾಸಭೆ ಆ.30ರಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಮುನಿರಾಜ ಅಜ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಬಿ.ಪ್ರೇಮಲತಾ ಅವರು ೨೦೧೫-೧೬ನೇ ಸಾಲಿನ ವಾರ್ಷಿಕ ವರದಿ ವಾಚಿಸಿ, ಸಂಘದಲ್ಲಿ ಎ, ಸಿ, ಮತ್ತು ಡಿ ಸೇರಿದಂತೆ ಒಟ್ಟು 9845 ಮಂದಿ ಸದಸ್ಯರಿದ್ದು, ರೂ.89 ಲಕ್ಷ ಪಾಲು ಬಂಡವಾಳವಿದೆ. ಸಂಘವು ಠೇವಣಿ ಯೋಜನೆಗಳ ಮೂಲಕ ವರದಿ ವರ್ಷ ಅಂತ್ಯಕ್ಕೆ ರೂ. 13.48 ಕೋಟಿ ಠೇವಣಿ ಸಂಗ್ರಹಿಸಿದೆ. ಸಂಘ ವಿವಿಧ ಯೋಜನೆಗಳಿಗೆ ಒಟ್ಟು ರೂ. 11.68 ಕೋಟಿ ಸಾಲ ವಿತರಿಸಿದೆ. ರೈತರ ಕೃಷಿ ಸಾಲಗಳಿಗೆ ರಾಜ್ಯ ಸರಕಾರದಿಂದ ರೂ. 42.10 ಲಕ್ಷ ಬಡ್ಡಿ ಸಹಾಯಧನ ಬಂದಿದೆ. ಲೆಕ್ಕ ಪರಿಶೋಧನೆಯಲ್ಲಿ ಸಂಘ ‘ಎ’ ದರ್ಜೆಯನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.
ಅಧ್ಯಕ್ಷ ಮುನಿರಾಜ ಅಜ್ರಿಯವರು ಮಾತನಾಡಿ, ಸುಮಾರು ೫೮ ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಂಘ ನಿರಂತರವಾಗಿ ಗ್ರಾಮೀಣ ಪ್ರದೇಶದ ರೈತರ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿ ಮಾಡಿದೆ. ಸಂಘದಲ್ಲಿ ಒಟ್ಟು 1930 ಸದಸ್ಯರಿದ್ದು, ವರದಿ ವರ್ಷದಲ್ಲಿ ಸುಮಾರು ರೂ.11.65 ಕೋಟಿ ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿ, ಸುಮಾರು ರೂ.86.06 ಕೋಟಿಯಷ್ಟು ವ್ಯವಹಾರ ನಡೆಸಲಾಗಿದೆ. ಸಾಲದ ಪೈಕಿ ಶೇ 99.57 ವಸೂಲಾಗಿದ್ದು, ಶೇ 15 ಡೆವಿಡೆಂಟ್ ಘೋಷಿಸಲಾಗಿದೆ. ಸಂಘವು ಸತತ ಐದು ವರ್ಷಗಳಲ್ಲಿ ‘ಎ’ಶ್ರೇಣಿ ಹೊಂದಿದ್ದು, ರೂ. 28.76 ಲಕ್ಷ ಲಾಭದಲ್ಲಿದೆ ಎಂದು ತಿಳಿಸಿದರು. ಸಂಘದ ಸಾಧನೆ ಮತ್ತು ಕಾರ್ಯಚಟುವಟಿಕೆಗಳನ್ನು ಗುರುತಿಸಿ ಕೇಂದ್ರ ಸಹಕಾರಿ ಬ್ಯಾಂಕ್ ಈ ವರ್ಷ ಸಂಘಕ್ಕೆ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಸಾಧನೆಗೆ ಸಂಘದ ಎಲ್ಲಾ ನಿರ್ದೇಶಕರು, ಸಿಬ್ಬಂದಿ-ವರ್ಗ ಹಾಗೂ ಸದಸ್ಯರ ಸಹಕಾರ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ಮುಂದೆ ಸಂಘ 100 ಕೋಟಿ ವ್ಯವಹಾರ ಮತ್ತು ರೂ.೫೦ ಲಕ್ಷ ಲಾಭಗಳಿಸಬೇಕು ಎಂಬ ಉದ್ದೇಶವನ್ನು ತಿಳಿಸಿದರು.
ಸಂಘದ ವಿವಿಧ ಅಭಿವೃದ್ಧಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಂಘದ ನಿರ್ದೇಶಕ ಕೆ. ಗಿರೀಶ್ ಡೋಂಗ್ರೆ ಸ್ವಾಗತಿಸಿದರು. ನಿರ್ದೇಶಕ ಶೈಲೇಶ್ ಕುಮಾರ್ ಧನ್ಯವಾದವಿತ್ತರು. ಸಂಘದ ಉಪಾಧ್ಯಕ್ಷ ಶೀನ ಶೆಟ್ಟಿ, ನಿರ್ದೇಶಕರಾದ ಅಜಿತ್‌ಕುಮಾರ್, ಗುರುವಪ್ಪ ಪೂಜಾರಿ, ವಿಮಲ, ಬಾಬು, ಆರ್ಥಿಕ ಬ್ಯಾಂಕ್ ಪ್ರತಿನಿಧಿ ಸಂದೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳಾದ ಶಶಿಕುಮಾರ್, ಹರಿಣಿ ಪ್ರಭು, ವನಿತ ಎನ್.ಹೆಚ್, ಹೇಮಲತಾ ಕೆ, ರಾಮಚಂದ್ರ ಎಂ, ಪ್ರಸಾದ್ ಎಸ್, ಹರೀಶ್ ಕೆ, ದಿನವಹಿ ನೌಕರರಾದ ನಳಿನಿ, ಅಶೋಕ್, ವಿನೋದ ಕುಮಾರ್ ಸಹಕರಿಸಿದರು. ಸಭೆಯ ಕೊನೆಯಲ್ಲಿ ಲಕ್ಕೀಕೂಪನ್ ಆಯ್ಕೆಯಾದವರಿಗೆ ಕೃಷಿ ಸಾಮಾಗ್ರಿಗಳನ್ನು ಬಹುಮಾನವಾಗಿ ಮಾಜಿ ಶಾಸಕ ಪ್ರಭಾಕರ ಬಂಗೇರ ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.