ಬೆಳ್ತಂಗಡಿಯಲ್ಲಿ ಸಂಭ್ರಮದ ಕೃಷ್ಣೋತ್ಸವ, ನಗರದ ಬೀದಿಗಳಲ್ಲಿ ಮೆರವಣಿಗೆ, ಗೋವಿಂದ ಸ್ಪರ್ಧೆ

2

3

4

5

6

7

8

1 ಬೆಳ್ತಂಗಡಿ : ಶ್ರೀ ಕೃಷ್ಣೋತ್ಸವ ಸೇವಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಆಟೋಟ ಸ್ಪರ್ಧೆ, ಧಾರ್ಮಿಕ ಸಭೆ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, ಗೋವಿಂದ ಸ್ಪರ್ಧೆ, ಸಾಧಕರಿಗೆ ಸನ್ಮಾನ, ಧಾರ್ಮಿಕ ಮತ್ತು ರಾಷ್ಟ್ರಪ್ರೇಮ ಉದ್ದೀಪನಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳೊನ್ನೊಳಗೊಂಡ ಕೃಷ್ಣೋತ್ಸವ 2016 ಕಾರ್ಯಕ್ರಮ ಆ. 28 ರಂದು ಬೆಳ್ತಂಗಡಿಯಲ್ಲಿ ನಡೆಯಲ್ಲಿ .
ರಾಜಕೀಯ ರಹಿತವಾಗಿ ಸರ್ವರನ್ನೂ ಸೇರಿಸಿಕೊಂಡು ನಡೆಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ಈ ಬಾರಿ ನಗರದ ವಾರ್ಡ್‌ಗಳಲ್ಲಿ ಮತ್ತು ಗುರುವಾಯನಕೆರೆ ಮತ್ತು ಲಾಲ ಗ್ರಾಮದವರನ್ನೂ ಸೇರಿಸಿಕೊಂಡು ಸಮಿತಿ- ಉಪಸಮಿತಿಗಳನ್ನು ರಚಿಸಿ ಜವಾಬ್ಧಾರಿ ಹಂಚಿಕೆಯ ಮೂಲಕ ಯಶಸ್ವಿಯಾಗಿ ಸಂಘಟಿಸಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿದರು. ಜಯಂತ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಇಚ್ಚಿಲ ಸುಂದರ ಗೌಡ ಅತಿಥಿಯಾಗಿದ್ದರು. 6  ವರ್ಷಕ್ಕಿಂತ ಕೆಳಗಿನ ಮಕ್ಕಳ ಶ್ರೀಕೃಷ್ಣ ವೇಶ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಗೌರವಾಧ್ಯಕ್ಷ, ಯುವ ನ್ಯಾಯವಾದಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ನೇತೃತ್ವ ವಹಿಸಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.