ತೋಟಗಾರಿಕಾ ಇಲಾಖೆ : ಯಾಂತ್ರೀಕರಣ ಕಾರ‍್ಯಕ್ರಮಕ್ಕೆ ಅರ್ಜಿ ಆಹ್ವಾನ

  ಬೆಳ್ತಂಗಡಿ : 2016-17ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮಕ್ಕೆ ಆಸಕ್ತ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಅಹ್ವಾನಿಸಿದ್ದು, ಫಲಾನುಭವಿಗಳು ಈ ಕೆಳಗಿನಂತೆ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಬಹುದು.
ನಿಗದಿತ ನಮೂನೆಯಲ್ಲಿ ಫಲಾನುಭವಿಗಳ ಭಾವಚಿತ್ರವಿರುವ ಹಾಗೂ ಫಲಾನುಭವಿ ಭರ್ತಿ ಮಾಡಿ ಸಹಿ ಮಾಡಿದ ಅರ್ಜಿ, ಪಹಣಿ (ಆರ್‌ಟಿಸಿ)(ಬೆಳೆ ಹಾಗೂ ವಿಸ್ತೀರ್ಣದ ಮಾಹಿತಿಯಿರಬೇಕು), ಗಣಕೀಕೃತ ಬೆಳೆ ದೃಡೀಕರಣ ಪತ್ರ, ಆಧಾರ ಕಾರ್ಡ, ಮತದಾರರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ. ವಿ.ಸೂ: ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಯಡಿ ಸಹಾಯಧನ ಪಡೆದ ಫಲಾನುಭವಿಗಳು ಅರ್ಹರಿರುವುದಿಲ್ಲ. ಅರ್ಜಿ ಸಲ್ಲಿಸಲು ಆ.31 ಕೊನೆಯ ದಿನವಾಗಿದೆ.
ನಿಗದಿತ ಗುರಿಗಿಂತ ಅಧಿಕ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತಿಗೊಂಡಲ್ಲಿ ನಿಯಾಮಾಸುಸಾರ ಅರ್ಹ ಅರ್ಜಿಗಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಲಾಗುವುದು. ಲಾಟರಿ ಮುಖಾಂತರ ಆಯ್ಕೆ ಮಾಡಲು ಸೇ.೧೦ ಕೊನೆ ದಿನ. ಆಯ್ಕೆ ಆದ ಫಲಾನುಭವಿಗಳು ಇಲಾಖೆಯಿಂದ ಕಾರ್ಯಾದೇಶ ಪಡೆದ ನಂತರ ಇಲಾಖೆಯಿಂದ 2016-17ನೇ ಸಾಲಿನಲ್ಲಿ ಅನುಮೋದಿತ ಸಂಸ್ಥೆಗಳಿಂದ ಯಂತ್ರೋಪಕರಣ ಖರೀದಿಸಿ, ವೋಚರ್/ಬಿಲ್ಲಿನ ಮೂಲ ಪ್ರತಿಗಳನ್ನು ಸಹಾಯಧನ ಪಡೆಯಲು ತೋಟಗಾರಿಕೆ ಇಲಾಖೆ ಕಛೇರಿಗೆ ಸಲ್ಲಿಸಬೇಕಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.