HomePage_Banner_
HomePage_Banner_
HomePage_Banner_

ವರದಕ್ಷಿಣೆ ಕಿರುಕುಳದಿಂದ ಉಜಿರೆ ಕನ್ಯಾಡಿಯ ಎಂಎಸ್‌ಡಬ್ಲ್ಯೂ ಪದವೀಧರೆ ಸ್ವಾತಿ.ಆರ್ ಶೆಟ್ಟಿ ಆತ್ಮಹತ್ಯೆ

Advt_NewsUnder_1

swathi 1

swathi

ಉಜಿರೆ :  ವರದಕ್ಷಿಣೆ ಕಿರುಕುಳದಿಂದ ಉಜಿರೆಯ ಕನ್ಯಾಡಿಯ ಸ್ವಾತಿ.ಆರ್ ಶೆಟ್ಟಿ ಆ.13ರಂದು ಗಂಡನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ನಂತರ ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಆ.18ರಂದು ಸಾವನ್ನಪ್ಪಿದ್ದಾರೆ.
2014ರಲ್ಲಿ ಮೂಡುಬಿದಿರೆಯ ಮೂಡು ಮಾರ್ನಾಡಿನ ಬೋಜ ಶೆಟ್ಟಿಯವರ ಪುತ್ರ ಶರತ್ಚಂದ್ರರವರರೊಂದಿಗೆ ಐದು ಲಕ್ಷ ವರದಕ್ಷಿಣೆ ಮತ್ತು ೩೦ ಪವನ್ ಚಿನ್ನ ನೀಡಿ ಮದುವೆ ಮಾಡಲಾಗಿತ್ತು. ಇವರು ಎಂಎಸ್‌ಡಬ್ಲ್ಯೂ ಪಧವೀದರೆಯಾಗಿದ್ದು, ಎರಡು ವಾರಗಳ ಹಿಂದೆ ಮಂಗಳೂರಿನಲ್ಲಿ ನೌಕರಿಗೆ ಸೇರಿ ನಿತ್ಯ ಹೋಗಿ ಬರುತ್ತಿದ್ದರು.
ಆದರೆ ಇದೀಗ ಗಂಡನ ಮನೆಯವರಿಂದ ಆಕೆಗೆ ವರದಕ್ಷಿಣೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ, ಗಂಡನ ಮನೆಯವರ ವರದಕ್ಷಿಣೆಯ ಕಿರುಕುಳದ ಕುರಿತು ತನ್ನ ತಾಯಿಯಲ್ಲಿ ಹೇಳಿಕೊಂಡಿದ್ದರಿಂದ ಸ್ವಾತಿಯ ತಾಯಿ ಗಂಡನ ಮನೆಯವರ ಪೈಕಿ ಐವರ ವಿರುದ್ಧ ಆ.26ರಂದು ದೂರು ದಾಖಲಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.