HomePage_Banner_
HomePage_Banner_
HomePage_Banner_
HomePage_Banner_
HomePage_Banner_

ನ್ಯೂಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಬಳ್ಳಮಂಜ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಉದ್ಘಾಟನೆ

123 ಮಚ್ಚಿನ: ನ್ಯೂಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಬಳ್ಳಮಂಜ ಇದರ ವತಿಯಿಂದ ಮಚ್ಚಿನ ಪ್ರೌಢಶಾಲಾ ವಠಾರದಲ್ಲಿ ಸಾರ್ವಜನಿಕ ಮೊಸರು ಕುಡಿಕೆ ಉತ್ಸವವು ಆ.24ರಂದು ಜರುಗಿತು.
ಕಾರ್ಯಕ್ರಮವನ್ನು ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರಾದ ನರಸಿಂಹ ಪ್ರಸಾದ್ ಜೋಗಿತ್ತಾಯ ಕಲಾಯಿ ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಟ್ಟು ಜಿ.ಪಂ. ಸದಸ್ಯೆ ಶ್ರೀಮತಿ ಮಮತಾ ಎಂ. ಶೆಟ್ಟಿ ವಹಿಸಿ ಮಾತನಾಡುತ್ತಾ ಈ ಸಮಾಜಕ್ಕೆ ಶ್ರೀಕೃಷ್ಣನು ನೀನು ನಿನ್ನ ಕರ್ತವ್ಯವನ್ನು ಮಾಡು, ಫಲ ಕೊಡುವವನು ನಾನು ಎಂದು ನಮಗೆ ಮಾರ್ಗದರ್ಶನವನ್ನು ನೀಡಿದ್ದಾನೆ ಎಂದು ಕೃಷ್ಣನ ಸಂದೇಶವನ್ನು ನೀಡಿ ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಮಡಂತ್ಯಾರು ತಾ.ಪಂ. ಸದಸ್ಯರಾದ ವಸಂತಿ ಲಕ್ಷ್ಮಣ್, ಮಚ್ಚಿನ ಪ್ರೌಢಶಾಲಾ ಮುಖ್ಯಶಿಕ್ಷಕ ಜಯ ನಾಯ್ಕ, ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಮಚ್ಚಿನ ಮುಖ್ಯಶಿಕ್ಷಕ ವಿಠಲ್ ಬಿ., ಮಚ್ಚಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರಾದ ವಸಂತ ಕುಮಾರಿ ಎಲಿಕುಡೆ, ನ್ಯೂಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸುಕೇಶ್, ಮಾಜಿ ಅಧ್ಯಕ್ಷರಾದ ಪ್ರಮೋದ್ ಕುಮಾರ್, ಲ್ಯಾನ್ಸಿ, ಹರ್ಷ ಬಳ್ಳಮಂಜ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಕ್ರೀಡಾಕೂಟ ಜರುಗಿತು. ಹರ್ಷ ಬಳ್ಳಮಂಜ ಸ್ವಾಗತಿಸಿ, ಪುಷ್ಪಕ್ ಧನ್ಯವಾದವಿತ್ತರು. ಸದಾಶಿವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.