ವಿವೇಕ ಜಾಗೃತ ಬಳಗದಿಂದ ಸೇವಾಶ್ರೀ ಶಿಬಿರ ಭಗವಂತ ನಮ್ಮ ಸತ್ಕಾರ್ಯಗಳನ್ನು ಪ್ರೇರೆಪಿಸುತ್ತಾನೆ

Seva Shibhira copyಗುರುವಾಯನಕೆರೆ : ಸ್ವಾಮಿ ವಿವೇಕಾನಂದರ ದಿವ್ಯ ಲೀಲಾಕ್ಷೇತ್ರವಾದ ಸಾಲಿಗ್ರಾಮದ ಡಿವೈನ್‌ಪಾರ್ಕ್‌ನ ಅಂಗಸಂಸ್ಥೆಗಳಾದ ವಿವೇಕ ಜಾಗೃತ ಬಳಗ ಮೂಡಬಿದ್ರೆ ಹಾಗೂ ಬೆಳ್ತಂಗಡಿ ಇದರ ಆಶ್ರಯದಲ್ಲಿ ಒಂದು ದಿನದ ಸೇವಾಶ್ರೀ ಶಿಬಿರವು ಆ.೨೧ರಂದು ಗುರುವಾಯನಕೆರೆಯ ಬಂಟರ ಭವನದಲ್ಲಿ ಜರುಗಿತು.
ಡಿವೈನ್ ಪಾರ್ಕ್ ಸಾಲಿಗ್ರಾಮ ಇದರ ಆಡಳಿತ ನಿರ್ದೇಶಕ ಡಾ| ಚಂದ್ರಶೇಖರ ಉಡುಪ ಅವರು ಸಂದೇಶ ನೀಡಿ, ನಾವು ವಿಶ್ವಮಯವಾದರೆ, ವಿಶ್ವ ಸುಖಮಯವಾಗುತ್ತದೆ. ಕೋಪ, ಮತ್ಸರ ಸೊನ್ನೆಯಾಗಬೇಕು, ಸಾಧನೆ ಮೂಲಕ ಸಂತೃಪ್ತಿ ಮನುಷ್ಯನ ಒಂದು ಮುಖ ತ್ಯಾಗ, ಇನ್ನೊಂದು ಮುಖ ಸೇವೆಯಾಗಿದೆ. ತ್ಯಾಗ ನನ್ನದಲ್ಲ, ಸೇವೆ ನಿನ್ನದೆ, ಭಗವಂತನನ್ನು ಪ್ರೇಮ-ಭಕ್ತಿಯಿಂದ ಸಂವಾದಿಸಬೇಕು ಜನರಲ್ಲಿ ಮೌನವಾಗಿರಬೇಕು, ಭಗವಂತ ನಮ್ಮ ಸತ್ಕಾರಗಳನ್ನು ಹುಡುಕಿ ಪ್ರೇರೆಪಿಸುತ್ತಾನೆ, ನಾವು ಸಾಧನೆ ಮೂಲಕ ಸಂತೃಪ್ತಿಯನ್ನು ಪಡೆಯಬೇಕು ಎಂದರು.
ಸಾಲಿಗ್ರಾಮ ಡಿವೈನ್ ಪಾರ್ಕ್‌ನ ಟ್ರಸ್ಟಿ ಬಿ.ಎಸ್ ಸೋಮಾಯಾಜಿ ಹಾಗೂ ಕೆ.ಜಿ. ಕರಿಸಿದ್ದಪ್ಪ ಧಾರ್ಮಿಕ ಸಂದೇಶ ನೀಡಿದರು. ವಿವೇಕ ಜಾಗೃತ ಬಳಗ ಮೂಡಬಿದ್ರೆಯ ಅಧ್ಯಕ್ಷ ಸುಭಾಷ್ ಶೆಟ್ಟಿ, ವಿವೇಕ ಜಾಗೃತ ಬಳಗ ಬೆಳ್ತಂಗಡಿಯ ಅಧ್ಯಕ್ಷ ದಯಾನಂದ ಪುತ್ತೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಿವೇಕ ಜಾಗೃತ ಬಳಗ ಬೆಳ್ತಂಗಡಿಯ ಸ್ಥಾಪಕಾಧ್ಯಕ್ಷ ಬಾಲಕೃಷ್ಣ ವಿ. ಶೆಟ್ಟಿ, ಪುಟ್ಟರಾಜು, ರಘುರಾಮ್, ವೀಣಾ ಪುಟ್ಟರಾಜು, ಉಮಾ ಅಶೋಕ್, ಸುಶೀಲ, ಚಿದಾನಂದ ಉಜಿರೆ, ಉಮೇಶ್ ಗುರುವಾಯನಕೆರೆ, ಅಶೋಕ್ ಶೆಟ್ಟಿ, ಸೇರಿದಂತೆ ಬೆಳ್ತಂಗಡಿ ಮತ್ತು ಮೂಡಬಿ ದ್ರೆಯ ನಾಗರಿಕರು, ವಿವೇಕ ಜಾಗೃತ ಬಳಗದ ಕಾರ್ಯಕರ್ತರು, ಸದಸ್ಯರು, ಭಾಗವಹಿಸಿದ್ದರು. ಶಿಬಿರ ಬೆಳಗ್ಗೆ ೮ಗಂಟೆಗೆ ಆರಂಭಗೊಂಡು ಸಂಜೆ ೫ ಗಂಟೆಯವರೆಗೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.